ಆರ್.ಚಂದ್ರು (R.Chandru) ಮತ್ತು ರಿಯಲ್ ಸ್ಟಾರ್ ಉಪೇಂದ್ರ (Upendra) ಕಾಂಬಿನೇಷನ್‌ನಲ್ಲಿ ಮೂಡಿ ಬಂದ `ಕಬ್ಜ’ 3ನೇ (Kabzaa) ಸಿನಿಮಾ ಇದಾಗಿದ್ದು, ಅಪ್ಪು ಹುಟ್ಟುಹಬ್ಬದ ದಿನ ಮಾರ್ಚ್ 17ಕ್ಕೆ ತೆರೆಗೆ ಅಪ್ಪಳಿಸಿದೆ. ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಕೂಡ ಬಂದಿದೆ. ಹೀಗಿರುವಾಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ತೆಲುಗಿನ ಸೂಪರ್ ಸ್ಟಾರ್‌ಗೆ ಆರ್.ಚಂದ್ರು ನಿರ್ದೇಶನ ಮಾಡಲಿದ್ದಾರೆ.
ಮಾರ್ಚ್ 16ರಂದು ಉಪ್ಪಿ, ಕೆ.ಪಿ ಶ್ರೀಕಾಂತ್ ಜೊತೆ ಆರ್.ಚಂದ್ರು ತಿರುಪತಿಗೆ ಭೇಟಿ ಕೊಟ್ಟಿದ್ದರು. `ಕಬ್ಜ’ ಸಿನಿಮಾ ರಿಲೀಸ್‌ಗೂ ಮುನ್ನವೇ ವಿಶೇಷ ಪೂಜೆ ಮಾಡಿಸಿದ್ದರು. ದೇವರ ದರ್ಶನ ಪಡೆದ ನಂತರ ಪವನ್ ಕಲ್ಯಾಣ್ (Pawan Kalyan) ಅವರನ್ನ ಆರ್.ಚಂದ್ರು ಭೇಟಿಯಾಗಿದ್ದಾರೆ. `ಕಬ್ಜ’ ಸಿನಿಮಾವನ್ನ ಅವರಿಗೆ ತೋರಿಸಿದ್ದಾರೆ. ಪವನ್ ಕಲ್ಯಾಣ್ ಕೂಡ `ಕಬ್ಜ’ ಚಿತ್ರವನ್ನ ನೋಡಿ ಇಷ್ಟಪಟ್ಟಿದ್ದಾರೆ. ಹಾಗಾಗಿ ಆರ್.ಚಂದ್ರು ಜೊತೆ ಸಿನಿಮಾ ಮಾಡುವ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಇಂದು ಜಿನಿವಾ ನಗರದಲ್ಲಿ ‘ಕಾಂತಾರ’ ಚಿತ್ರದ ಪ್ರದರ್ಶನ
ಪವನ್ ಕಲ್ಯಾಣ್ ಅವರು ಮಾಸ್, ರಗಡ್ ಪಾತ್ರದ ಮೂಲಕ ಈಗಾಗಲೇ ಮನಗೆದ್ದಿದ್ದಾರೆ. ಈಗ ಆರ್.ಚಂದ್ರು ಕೂಡ ಅಂತಹದ್ದೇ ಮಾಸ್ ಚಿತ್ರ ಮಾಡಲು ಹೊರಟಿದ್ದಾರೆ. ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.
Thnku for your love and support sir@PawanKalyan pic.twitter.com/8uuRBoe4uP
— R.Chandru (@rchandru_movies) March 16, 2023
ಸದ್ಯ `ಕಬ್ಜ’ (Kabzaa) ಮೂಲಕ ಮಲ್ಟಿಸ್ಟಾರ್ ಸಿನಿಮಾ ಮಾಡಿ ಗಮನ ಸೆಳೆದಿರುವ ಆರ್.ಚಂದ್ರು, ಇದೀಗ ಹೊಸ ಬಗೆಯ ಸಿನಿಮಾ ಮಾಡಲು ಮುಂದಾಗಿದ್ದಾರೆ.