Connect with us

Cinema

ವಿಲನ್ ಚಿತ್ರದಲ್ಲಿ ವಿಲನ್ ಯಾರು? ಪ್ರೇಮ್ ಹೇಳಿದ್ದೇನು? ಶೂಟಿಂಗ್ ಎಲ್ಲಿ ನಡೆಯತ್ತೆ?

Published

on

Share this

ಬೆಂಗಳೂರು: ಸುದೀಪ್ ಹಾಗೂ ಶಿವರಾಜ್‍ಕುಮಾರ್ ನಟನೆಯ `ದಿ ವಿಲನ್’ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಇತ್ತೀಚಿನ ದಿನಗಳಲ್ಲಿ ಹೊಸ ಹುಡುಗರ ಸಿನೆಮಾ ಬಂದಾಗ ಸ್ಟಾರ್ ನಟರು ಬಂದು ಚಿತ್ರದ ಪೋಸ್ಟರ್‍ಗಳನ್ನು ಲಾಂಚ್ ಮಾಡ್ತಾರೆ. ಆದ್ರೆ ಇಲ್ಲಿ ಸ್ಟಾರ್ ನಟರನ್ನು ಹೊಸ ಹುಡುಗ ರೋಗ್ ಚಿತ್ರದ ಹೀರೋ ಇಶಾನ್ ಲಾಂಚ್ ಮಾಡಿದ್ದಾರೆ. ಇದು ನನಗೆ ಹೆಮ್ಮೆಯ ವಿಷಯ ಅಂತಾ `ದಿ ವಿಲನ್’ ಚಿತ್ರದ ನಿರ್ದೇಶಕ ಪ್ರೇಮ್ ಹರ್ಷ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ಒಂದು ಕುತೂಹಲವಿತ್ತು. ಯಾಕಂದ್ರೆ ನನ್ನ ಕೆಲಸ ಸ್ವಲ್ಪ ನಿಧಾನ. ಹೀಗಾಗಿ ನನ್ನನ್ನು ಬಿಳಿ ಆನೆ ಅಂತಾನೆ ಎಲ್ರೂ ಗೇಲಿ ಮಾಡ್ತಾ ಇದ್ರು. ಇಬ್ಬರು ಸ್ಟಾರ್ ನಟರನ್ನಿಟ್ಟುಕೊಂಡು ಪ್ರೇಮ್ ಹೇಗೆ ಈ ಚಿತ್ರ ಮಾಡಬಹುದು ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಆದ್ರೆ ಇಲ್ಲಿ ನಿರ್ಮಾಪಕರಾದ ಮನೋಹರ್ ನನ್ನ ಸಾಕಿದ್ದಾರೆ. ಹೀಗಾಗಿ ಇಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ ಅಂತಾ ಹೇಳಿದ್ರು.

ಚಿತ್ರದಲ್ಲಿ ಇಬ್ಬರು ನಟರಿಗೂ ವಿಭಿನ್ನವಾದ ಲುಕ್ ಕೊಟ್ಟಿದ್ದೀವಿ. ಯಾಕಂದ್ರೆ ಶಿವಣ್ಣ ಹಾಗೂ ಸುದೀಪ್ ಇಬ್ಬರೂ ನನಗೆ ಅಣ್ಣನಂತೆ. ಹೀಗಾಗಿ ಈ ಇಬ್ಬರೂ ಸೋಲಬಾರದು ಎಂಬ ಉದ್ದೇಶದಿಂದ ಡಿಫರೆಂಟ್ ಲುಕ್ ಕೊಟ್ಟಿದ್ದೀವಿ ಅಂತಾ ಅಂದ್ರು.

ಎಲ್ಲೆಲ್ಲಿ ಚಿತ್ರೀಕರಣ: ಸೋಮವಾರದಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತದೆ. ಬೆಂಗಳೂರಿನಲ್ಲಿ 13 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಬಳಿಕ 20 ದಿನಗಳ ಕಾಲ ಲಂಡನ್‍ನಲ್ಲಿ, ಅಲ್ಲಿಂದ ವಾಪಾಸ್ಸಾದ ಬಳಿಕ ಬ್ಯಾಂಕಾಂಕ್ ಗೆ ಚಿತ್ರತಂಡ ತೆರಳಿ ಅಲ್ಲಿಯೂ ಶೂಟಿಂಗ್ ನಡೆಸಲಿದೆ. ಇನ್ನು ಕೇರಳ ಅಥವಾ ಚೈನಾದಲ್ಲಿಯೂ ಚಿತ್ರೀಕರಣ ಮಾಡೋ ಉದ್ದೇಶ ಪ್ರೇಮ್ ಅವರಿಗಿದೆ.

ವಿಲನ್ ಯಾರು?: ಚಿತ್ರದಲ್ಲಿ ವಿಲನ್ ಯಾರು ಎಂಬುವುದನ್ನು ಗೌಪ್ಯವಾಗಿಯೇ ಇಟ್ಟ ಪ್ರೇಮ್ ಸ್ಕ್ರೀನ್ ಮೇಲೆ ಬಂದ ಬಳಿಕ ವಿಲನ್ ಯಾರು ಎಂಬುವುದನ್ನೇ ನೀವೇ ನೋಡಿ ಅಂತಾ ಹೇಳಿದ್ರು. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಹೊಸ ಹುಡುಗ ಇಶಾನ್ ಅವರಿಗೆ ಶಿವಣ್ಣ, ಸುದೀಪ್ ಹಾಗೂ ಮನೋಹರ್ ಹೀಗೆ ಎಲ್ಲರ ಆಶೀರ್ವಾದ ಮೇಲಿರಲಿ. ಮುಂದೊಂದು ದಿನ ಆತನೂ ದೊಡ್ಡ ಸ್ಟಾರ್ ನಟ ಆಗಲಿ ಅಂತಾ ಪ್ರೇಮ್ ಹಾರೈಸಿದ್ರು.

ಸುದೀಪ್‍ಗೆ ನಾಯಕಿ ಫಿಕ್ಸ್ ಆಗಿಲ್ಲ: ಅಣ್ಣಮ್ಮನ ಮೇಲಿನ ಭಕ್ತಿಯಿಂದ ಫಸ್ಟ್ ಲುಕ್ ಇಲ್ಲಿ ಬಿಡುಗಡೆ ಮಾಡಿದ್ದೇನೆ. ಶಿವರಾಜಕುಮಾರ್ ಅವರ ನಾಯಕಿಯಾಗಿ ಶ್ರುತಿ ಹರಿಹರನ್ ಆಯ್ಕೆಯಾಗಿದ್ದಾರೆ. ಆದ್ರೆ ಸುದೀಪ್‍ಗೆ ಇಲ್ಲಿಯವರೆಗೆ ನಾಯಕಿ ಯಾರೆಂಬುದನ್ನ ನಿರ್ಧರಿಸಿಲ್ಲ. ನಾಯಕಿಯ ಬಗ್ಗೆ ಕಟ್ಟುಕತೆಗಳು ಹರಿದಾಡ್ತಿವಿ. ಆದ್ರೆ ನಾಯಕಿಯನ್ನ ಇನ್ನಷ್ಟೇ ಫಿಕ್ಸ್ ಮಾಡ್ತಾ ಇದ್ದೇವೆ ಅಂತಾ ಹೇಳಿದ್ರು.

ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಇಬ್ಬರೂ ನನಗೆ ಅಣ್ಣಂದಿರಂತೆ. ಹೀಗಾಗಿ ಇಂದು ನಾನು ಅವರ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿರೋದು ನನಗೆ ತುಂಬಾನೇ ಸಂತಸವಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಚಿತ್ರತಂಡಕ್ಕೆ ನನ್ನ ಅಭಿನಂದನೆ. ನನ್ನ ಚಿತ್ರ ರೋಗ್ ಈಗಾಗಲೇ ಬಿಡುಗಡೆಗೊಂಡಿದ್ದು, ಹಾರೈಸಿದ ಎಲ್ಲರಿಗೂ ಧನ್ಯವಾದ ಅಂತಾ ಫಸ್ಟ್ ಲುಕ್ ಬಿಡುಗಡೆ ಮಾಡಿದ ರೋಗ್ ಚಿತ್ರದ ನಟ ಇಶಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಶಿವಣ್ಣ ಜೊತೆ ಇದು ನನ್ನ ಎರಡನೆಯ ಚಿತ್ರ. ದೊಡ್ಡ ಸ್ಟಾರ್‍ಗಳನ್ನಿಟ್ಟುಕೊಂಡು ಚಿತ್ರ ಮಾಡೋದು ತುಂಬಾನೇ ಕಷ್ಟ. ಹಲವು ಮಂದಿ ಪ್ರೇಮ್ ಅವರು ಈ ಚಿತ್ರ ಮಾಡ್ತಾರಾ ಅನ್ನೋ ಪ್ರಶ್ನೆಗಳನ್ನು ಹಾಕಿದ್ರು. ಆದ್ರೆ ಇಂದು ನಾವು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದೇವೆ. ಶಿವಣ್ಣ ಸುದೀಪ್ ಇಬ್ರೂ ಹೃದಯ ಶ್ರೀಮಂತಿಕೆ ಇರುವಂತಹ ನಾಯಕ ನಟರು. ಪ್ರೇಮ್ ಅವರ ಒಡನಾಟದಿಂದ ಇಂದು ಇದು ಸಾಧ್ಯವಾಯಿತು ಅಂತಾ ಚಿತ್ರದ ನಿರ್ಮಾಪಕ ಮನೋಹರ್ ಹೇಳಿದ್ರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ `ದಿ ವಿಲನ್’ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು ತನ್ವಿ ಫಿಲಂಸ್‍ನಡಿ ಈ ಚಿತ್ರವನ್ನು ಸಿ.ಆರ್. ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿದಿ ವಿಲನ್ ಫಸ್ಟ್ ಲುಕ್ ರಿಲೀಸ್, ಬೆಂಗಳೂರಿನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್

Click to comment

Leave a Reply

Your email address will not be published. Required fields are marked *

Advertisement