2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ನಿರ್ದೇಶಕ ಪವನ್‌ ಒಡೆಯರ್‌ ದಂಪತಿ

Public TV
1 Min Read
apeksha purohit

ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ನಿರ್ದೇಶಕ ಪವನ್ ಒಡೆಯರ್(pavan wadeyar)- ಅಪೇಕ್ಷಾ ಪುರೋಹಿತ್ (Apeksha Purohit) ದಂಪತಿ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಶೌರ್ಯ ಎಂಬ ಮುದ್ದಾದ ಗಂಡು ಮಗನಿದ್ದು, ಮತ್ತೆ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ ನಟಿ ಅಪೇಕ್ಷಾ.

apeksha 1

ರಣವಿಕ್ರಮ, ಗೂಗ್ಲಿ, ಡೊಳ್ಳು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಿರ್ದೇಶಕ ಪವನ್ ಒಡೆಯರ್ (Pavan Wadeyar) ಮನೆಯಲ್ಲಿ ಸಂಭ್ರಮ, ಖುಷಿ ಮನೆ ಮಾಡಿದೆ. ತಮ್ಮ ಕುಟುಂಬಕ್ಕೆ ಹೊಸ ಅತಿಥಿ ಬರುವ ಸಂತಸದಲ್ಲಿದ್ದಾರೆ. ಸದ್ಯ ಪವನ್ ಪತ್ನಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ (Baby Bump Photoshoot) ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

apeksha

ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ನಟಿ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ನಮ್ಮ 2ನೇ ಮಗು ಜಗತ್ತಿಗೆ ಕಾಲಿಡುತ್ತಿದೆ. ನಿಮ್ಮ ಪ್ರೀತಿ ಮತ್ತು ಹಾರೈಕೆ ಇರಲಿ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಆಸ್ಕರ್ ನಗೆ ಬೀರಿದ್ದ ಬೊಮ್ಮನ್-ಬೆಳ್ಳಿ ಬದುಕು ಮೂರಾಬಟ್ಟೆ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಶ್ರೀಮತಿ ಭಾಗ್ಯಲಕ್ಷ್ಮಿʼ ಸೀರಿಯಲ್‌ನಲ್ಲಿ ನಾಯಕಿಯಾಗಿ ಅಪೇಕ್ಷಾ (Apeksha Purohit) ಬಣ್ಣ ಹಚ್ಚಿದ್ದರು. ಪವನ್ ಒಡೆಯರ್ ಅವರನ್ನು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ 2018ರಲ್ಲಿ ಮದುವೆಯಾದರು. ಈಗ ಅಪೇಕ್ಷಾ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಕೂಡ ಗುರುತಿಸಿಕೊಳ್ತಿದ್ದಾರೆ.

Share This Article