ಸುದೀಪ್‌ಗೂ ಮುನ್ನ ಶಿವಣ್ಣಗೆ ‘ಸಪ್ತಸಾಗರದಾಚೆ ಎಲ್ಲೋ’ ನಿರ್ದೇಶಕ ಆ್ಯಕ್ಷನ್ ಕಟ್

Public TV
1 Min Read
hemanth rao

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳಿಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಹೇಮಂತ್ ರಾವ್ ಈಗ ಶಿವರಾಜ್‌ಕುಮಾರ್ ಜೊತೆಗಿನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸುದೀಪ್‌ಗೂ (Sudeep) ಮುನ್ನ ಶಿವಣ್ಣಗೆ (Shivarajukumar) ನಿರ್ದೇಶನ ಮಾಡಲಿದ್ದಾರೆ. ಇದನ್ನೂ ಓದಿ:ಬ್ರೈನ್ ಹ್ಯಾಮ್ರೇಜ್‌ನಿಂದ ನಟಿ ರಿಷ್ತಾ ಲಬೋನಿ ಶಿಮಾನಾ ನಿಧನ

hemanth rao

ಸಿನಿಮಾದಿಂದ ಸಿನಿಮಾ ಹೊಸ ಬಗೆಯ ಕಥೆ ಹೇಳುವ ಹೇಮಂತ್ ರಾವ್ ಅವರು ಇದೀಗ ಆ್ಯಕ್ಷನ್ ಡ್ರಾಮಾ ಜಾನರ್ ಕಥೆ ಕೈಗೆತ್ತಿಕೊಂಡಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಮಾಡುವಾಗಲೇ ಈ ಕಥೆ ಹೊಳೆದಿದ್ದು, ಸ್ಕ್ರೀಪ್ಟ್‌ ಡೆವಲಪ್ ಮಾಡಿದ್ದರು. ಹೇಮಂತ್ (Hemanth Rao) ಬರೆದ ಕಥೆ ಕೇಳಿ ವಿಭಿನ್ನ ಎನಿಸಿ ಚಿತ್ರಕ್ಕೆ ಶಿವಣ್ಣ ಓಕೆ ಎಂದಿದ್ದಾರೆ. ಈಗ ಸಿನಿಮಾ ಕೆಲಸ ಕೂಡ ಶುರುವಾಗಿದೆ.

shivarajkumar actor

ಸಿನಿಮಾಗೆ ತೆರೆ ಮರೆಯಲ್ಲಿ ಸಾಕಷ್ಟು ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಟೈಟಲ್ ಕೂಡ ಘೋಷಣೆ ಆಗಲಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಿಂದ ಹೇಮಂತ್ ರಾವ್ ಮತ್ತು ಶಿವಣ್ಣ (Shivarajkumar) ಕಾಂಬಿನೇಷನ್ ಸಿನಿಮಾ ಶೂಟಿಂಗ್ ಶುರುವಾಗಲಿದೆ.

ಈ ಸಿನಿಮಾದ ನಂತರವೇ ಸುದೀಪ್ ಜೊತೆ ಹೇಮಂತ್ ರಾವ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಸುದೀಪ್ ಕೂಡ ‘ಮ್ಯಾಕ್ಸ್’ ಬಳಿಕ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿದ್ದು, ನಂತರ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆಯಂತೆ. ಅಧಿಕೃತ ಘೋಷಣೆಗೆ ಕಾಯಬೇಕಿದೆ.

Share This Article