‘ಮಠ’ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Guruprasad) ಅವರು ಕೊನೆಯದಾಗಿ ‘ಎದ್ದೇಳು ಮಂಜುನಾಥ 2’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರು ಆತ್ಮಹತ್ಯೆಗೂ ಮುನ್ನ ಅವರ ಮೆಸೇಜ್ ಏನಾಗಿತ್ತು? ಸಿನಿಮಾಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಸಂಬಂಧಿ ರವಿ ದೀಕ್ಷಿತ್ (Ravi Dheekshith) ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೂ ಮುನ್ನವೇ ಬದುಕಿನ ಆಟ ಮುಗಿಸಿದ ಗುರುಪ್ರಸಾದ್
Advertisement
ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗುವ ಮುನ್ನ ‘ಫ್ರೆಂಡ್ಸ್ ಫೋರಮ್’ ಎಂಬ ವಾಟ್ಸ್ಅಪ್ ಗ್ರೂಪ್ನಲ್ಲಿ, ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ, ಸದ್ಯ ವಿಶಾಂತ್ರಿ ಪಡೆದುಕೊಳ್ಳುತ್ತಿದ್ದೇನೆ. ದೀಪಾವಳಿ ಹಬ್ಬದ ನಂತರ ಸಿನಿಮಾ ಚಟುವಟಿಕೆ ಮುಂದುವರೆಸೋಣ ಎಂದು ತಿಳಿಸಿದ್ದರು. ಅ.26ರ ಸಂಜೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅ.31ರಂದು ಮತ್ತೆ ಸಿನಿಮಾ ಕುರಿತು ಅಪ್ಡೇಟ್ ಕೊಡುವುದಾಗಿ ತಿಳಿಸಿದರು ಎಂದು ಸಂಬಂಧಿ ರವಿ ದೀಕ್ಷಿತ್ ತಿಳಿಸಿದ್ದಾರೆ.
Advertisement
Advertisement
ಅವರನ್ನು ಕಡೆಯದಾಗಿ ನೋಡಿದ್ದು, ಕಳೆದ ತಿಂಗಳು ‘ಎದ್ದೇಳು ಮಂಜುನಾಥ 2’ ಸಿನಿಮಾದ ಡಬ್ಬಿಂಗ್ನಲ್ಲಿ ಭೇಟಿಯಾಗಿದ್ದೀವಿ. ಆ ನಂತರ ಒಂದು ದಿನ ನನಗೆ ಕಾಲ್ ಮಾಡಿ, ಹುಷಾರ್ ಇಲ್ಲ. ಬಿಪಿ ಜಾಸ್ತಿ ಆಗುತ್ತಿದೆ. ಆಸ್ಪತ್ರೆಗೆ ಅಡ್ಮೀಟ್ ಆಗುತ್ತಿದ್ದೇನೆ ಎಂದು ತಿಳಿಸಿದ್ದರು. ಸರಿ ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಮಾತನಾಡಿದ್ದೆ ಎಂದಿದ್ದಾರೆ. ಅವರಿಗೆ ಬಿಪಿ ಮತ್ತು ಚರ್ಮ ರೋಗದ ಸಮಸ್ಯೆ ಇತ್ತು ಎಂದಿದ್ದಾರೆ.
Advertisement
ಈ ಹಿಂದೆ ಒಂದು ಮದುವೆ ಆಗಿ ಅವರು ಡಿವೋರ್ಸ್ ಪಡೆದುಕೊಂಡಿದ್ದರು. ಆ ನಂತರ 2ನೇ ಮದುವೆಯಾಗಿದ್ದರು. ಈ ದಂಪತಿಗೆ 3 ವರ್ಷದ ಮಗುವಿಗೆ ಎಂದಿದ್ದಾರೆ. ಅವರ ವೈಯಕ್ತಿಕ ಬದುಕಿನ ಬಗ್ಗೆ ಗುರುಪ್ರಸಾದ್ ಎಲ್ಲೂ ಹಂಚಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.