ಬಾಲಿವುಡ್ ನಟ ರಣ್‌ವೀರ್ ಸಿಂಗ್- ಕಿಯಾರಾ ಅಡ್ವಾಣಿ (Kiara Advani) ಜೋಡಿಯಾಗಿ ಬರುತ್ತಿದ್ದಾರೆ. ಡಾನ್-3 ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದ್ರೆ ಇಬ್ಬರೂ ತೆರೆಯ ಮೇಲೆ ರೊಮ್ಯಾನ್ಸ್ ಮಾಡೋದನ್ನು ನೋಡೋದು ಯಾವಾಗ? ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.
ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್-3’ ಚಿತ್ರದಲ್ಲಿ ರಣ್‌ವೀರ್ ಸಿಂಗ್‌ಗೆ (Ranveer Singh) ಕಿಯಾರಾ ನಾಯಕಿಯಾಗಿದ್ದಾರೆ. ಹೆಸರಿಗೆ ಮಾತ್ರ ‘ಡಾನ್-3’ ಆದರೆ ಸಖತ್ ಆ್ಯಕ್ಷನ್, ಲವ್ ಸ್ಟೋರಿ, ಎಮೋಷನ್ಸ್ ಎಲ್ಲವೂ ಈ ಸಿನಿಮಾದಲ್ಲಿ ಇರಲಿದೆ. ಹೊಸ ಬಗೆಯ ಕಥೆಯನ್ನೇ ಫರ್ಹಾನ್ ರೆಡಿ ಮಾಡಿದ್ದಾರೆ.

ಈಗಾಗಲೇ ಶಾರುಖ್ ಖಾನ್ (Sharukh Khan) ನಟಿಸಿರುವ ‘ಡಾನ್’ ಸರಣಿ ಸಿನಿಮಾಗಳು ಪ್ರೇಕ್ಷಕರಿಗೆ ಮೆಚ್ಚುಗೆಯಾಗಿತ್ತು. ಡಾನ್ ಪಾರ್ಟ್ 3ನಲ್ಲಿ ರಣ್‌ವೀರ್ ಸಿಂಗ್ ನಟಿಸುತ್ತಿರುವ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಣ್‌ವೀರ್‌ಗೆ ಈ ಚಿತ್ರದ ಮೂಲಕ ಬ್ರೇಕ್ ಸಿಗುತ್ತಾ? ಕಾದುನೋಡಬೇಕಿದೆ.


