ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲಿ (Atli) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ.
ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬ್ಯುಸಿನೆಸ್ ಮಾಡಿದೆ. ಭಾರತದಲ್ಲೇ 400 ಕೋಟಿಗೂ ಅಧಿಕ ಹಣ ಬಾಚಿದೆ. ವಿಶ್ವದಾದ್ಯಂತ 800 ಕೋಟಿಗೂ ಅಧಿಕ ಹಣ ನಿರ್ಮಾಪಕರಿಗೆ ಹರಿದು ಬಂದಿದೆ. ಈ ಖುಷಿಯಲ್ಲೇ ಅಟ್ಲಿ ಜವಾನ್ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ.
ಜವಾನ್ 2 ಸಿನಿಮಾದಲ್ಲಿ ವಿಕ್ರಮ್ ರಾಥೋಡ್ ಪಾತ್ರದ ಮೇಲೆ ಹೆಚ್ಚು ಫೋಕಸ್ ಮಾಡಲಾಗುವುದು ಮತ್ತು ಈ ಸಿನಿಮಾ ಇನ್ನೂ ವಿಶೇಷವಾಗಿ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ ಅಟ್ಲಿ. ಜವಾನ್ ಸಿನಿಮಾ ಭಾರೀ ಗೆಲುವು ಸಾಧಿಸುತ್ತಿದ್ದಂತೆಯೇ ಬಾಲಿವುಡ್ ನಲ್ಲೂ ಅಟ್ಲಿ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
Web Stories