‘ವಿಕ್ರಾಂತ್ ರೋಣ’ ಸಿನಿಮಾ ಡೈರೆಕ್ಟರ್ ಅನೂಪ್ ಭಂಡಾರಿ (Anup Bhandari) ಜೊತೆ ಮತ್ತೊಮ್ಮೆ ಕಿಚ್ಚ ಸುದೀಪ್ (Kichcha Sudeep) ಕೈಜೋಡಿಸಿದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾ ಮಾಡುವ ಬಗ್ಗೆ ಸೆ.2ರಂದೇ ಅಧಿಕೃತ ಘೋಷಣೆ ಆಗಿದೆ. ಸದ್ಯ ಈ ಚಿತ್ರದಲ್ಲಿ ಸುದೀಪ್ ‘ಬಿಲ್ಲ ರಂಗ ಭಾಷಾ’ನಾಗಿ ತ್ರಿಬಲ್ ರೋಲ್‌ನಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆಗೆ ಡೈರೆಕ್ಟರ್ ಅನೂಪ್ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.
View this post on Instagram
ಈ ಚಿತ್ರದಲ್ಲಿ ‘ಬಿಲ್ಲ ರಂಗ ಭಾಷಾ’ (Billa Ranga Basha) ಅಂದರೆ ಸುದೀಪ್ ಅವರೇ ಆದರೆ ಅದು ಒಬ್ಬರೇ ಅಥವಾ ತ್ರಿಬಲ್ ರೋಲಾ ಎಂದು ಮುಂದಿನ ದಿನಗಳಲ್ಲಿ ತಿಳಿಸೋದಾಗಿ ಅನೂಪ್ ಭಂಡಾರಿ ಹೇಳಿಕೆ ನೀಡುವ ಮೂಲಕ ಫ್ಯಾನ್ಸ್‌ಗೆ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಮುಂದೂಡಿದ ಫರ್ಹಾನ್ ಅಖ್ತರ್
ಚಿತ್ರದಲ್ಲಿ 200 ವರ್ಷದ ಭವಿಷ್ಯದ ಕಥೆ ಹೇಳೋಕೆ ಹೊರಟಿದ್ದಾರೆ ಸುದೀಪ್. ‘ವಿಕ್ರಾಂತ್ ರೋಣ’ ಸಿನಿಮಾಗಿಂತ ಮುಂಚೆ ’ಬಿಲ್ಲ ರಂಗ ಭಾಷಾ’ ಸಿನಿಮಾ ಮಾಡುವ ಬಗ್ಗೆ ಪ್ಲ್ಯಾನ್ ಆಗಿತ್ತು. ಸಿನಿಮಾ ತಯಾರಿಗೂ ಹಾಗೇ ಸಮಯ ಬೇಕಾದರಿಂದ ಮುಂದೂಡಲಾಗಿತ್ತು. ವಿಎಫ್‌ಎಕ್ಸ್ ಮತ್ತು ಟೆಕ್‌ನಿಕಲಿ ಕೂಡ ವ್ಯವಸ್ಥೆ ಆಗಬೇಕಾಗಿತ್ತು. ಈ ಅದಕ್ಕೆಲ್ಲಾ ಸಮಯ ಕೂಡಿ ಬಂದಿದೆ ಎಂದು ಅನೂಪ್ ಮಾತನಾಡಿದ್ದಾರೆ.