ಬಹುನಿರೀಕ್ಷಿತ ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನಯಾನ ಆರಂಭ

Advertisements
– ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಹಸಿರು ನಿಶಾನೆ
– ಮೊದಲ ಪ್ರಯಾಣದಲ್ಲಿ ಉತ್ತರ ಕರ್ನಾಟಕ ಭಾಷೆಯಲ್ಲೇ ಸಲಹೆ, ಸೂಚನೆ

ಹುಬ್ಬಳ್ಳಿ: ಬಹುನಿರೀಕ್ಷಿತ ದೆಹಲಿ-ಹುಬ್ಬಳ್ಳಿ (Hubballi), ಹುಬ್ಬಳ್ಳಿ-ದೆಹಲಿ (Delhi) ನಡುವೆ ನೇರ ವಿಮಾನಯಾನ ಸಂಪರ್ಕ ಇಂದಿನಿಂದ ಆರಂಭವಾಗಿದೆ. ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.

Advertisements

ಈ ವಿಮಾನಯಾನ ಸೇವೆಯಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕ ಜನರ ಬಹುದಿನಗಳ ಕನಸೊಂದು ಈಡೇರಿದಂತಾಗಿದೆ. ಹುಬ್ಬಳ್ಳಿಯಿಂದ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ದೊರೆತಿರುವುದು ನಗರದ ಪ್ರಗತಿಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ. ಪ್ರತಿ ನಿತ್ಯ ಈ ಸೇವೆ ಲಭ್ಯವಿರುತ್ತದೆ. ಹುಬ್ಬಳಿಯ ಜನ ಕೇವಲ 2 ಗಂಟೆ 30 ನಿಮಿಷದಲ್ಲಿ ದೆಹಲಿಗೆ ಪ್ರಯಾಣಿಸಬಹುದಾಗಿದೆ. ಇದನ್ನೂ ಓದಿ: ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು

Advertisements

ಇಂಡಿಗೋ (IndiGo) ವಿಮಾನ ಪ್ರತಿದಿನ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸಂಖ್ಯೆ 6E-5625 ಬೆಳಿಗ್ಗೆ 10:00ಕ್ಕೆ ಹೊರಟು 12-45ಕ್ಕೆ ಹುಬ್ಬಳ್ಳಿ ತಲುಪಲಿದೆ. ಮರಳಿ ಮಧ್ಯಾಹ್ನ 1:15ಕ್ಕೆ ಹುಬ್ಬಳ್ಳಿಯಿಂದ ಹೊರಟು 3:45ಕ್ಕೆ ದೆಹಲಿ ತಲುಪಲಿದೆ. ಇದನ್ನೂ ಓದಿ: `ರಾಷ್ಟ್ರಪತಿಗಳು ಸುಂದರವಾಗಿಲ್ಲ’ ಎಂದ TMC ನಾಯಕನ ಪರವಾಗಿ ಕ್ಷಮೆ ಕೋರಿದ ಮಮತಾ ಬ್ಯಾನರ್ಜಿ

Advertisements

ಇಂದು ಮೊದಲ ವಿಮಾನ ಹಾರಾಟದ ಸಮಯದಲ್ಲಿ ಇಂಡಿಗೋ ಸಂಸ್ಥೆಯ ಅಕ್ಷಯ ಪಾಟೀಲ್ ಅವರು ವಿಮಾನ ಹಾರಾಟಕ್ಕೆ ಮೊದಲು ಪ್ರಯಾಣಿಕರನ್ನುದ್ದೇಶಿಸಿ, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲೇ ಮಾತನಾಡಿದ್ದು ವಿಶೇಷವಾಗಿತ್ತು.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ವರ್ಚುವಲ್ ಮೂಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Live Tv

Advertisements
Exit mobile version