DistrictsKarnatakaLatestLeading NewsMain PostMysuru

ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು

ಮೈಸೂರು: ಸಂಸದ ಪ್ರತಾಪ್‌ಸಿಂಹ (Prtap Simha) ಅವರಿಗೆ ಬಸ್ ನಿಲ್ದಾಣದ (Bus Stand) ಗುಂಬಜ್‌ಗಳೆಲ್ಲವೂ ಮುಸ್ಲಿಮರ ಮಸೀದಿಯಂತೆ (Muslims Mosque) ಕಾಣ್ತಿವೆ. ಅದಕ್ಕೆ ನಾವೇನು ಮಾಡೋಕಾಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ (Tanveer Sait) ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿಂದು (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಬಜ್ ಮಾದರಿಯ ಬಸ್ ನಿಲ್ದಾಣ ಧ್ವಂಸ ಮಾಡೋದು ಖಚಿತ ಎಂಬ ಪ್ರತಾಪ್‌ಸಿಂಹ ಹೇಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ: ಪ್ರತಾಪ್ ಸಿಂಹ

ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ - ಸೇಠ್ ತಿರುಗೇಟು

ಯಾರ ಯಾರ ದೃಷ್ಟಿಯಲ್ಲಿ ಏನು ಕಾಣುತ್ತೊ ಅದೇ ಕಾಣೊದು. ಗೋಪುರಗಳು ಮಸೀದಿ ಮಾದರಿಯಲ್ಲಿ ಇದೆ ಎಂದು ಹೇಳುವಂತಹ ಪ್ರತಾಪ್ ಸಿಂಹ ಪ್ರಜ್ಞೆ ಯಾವ ರೀತಿ ಇದೆ ಎಂಬುದನ್ನ ತಿಳಿದುಕೊಳ್ಳಬೇಕು. ಇದು ಸರ್ಕಾರದ ಆಸ್ತಿ, ಏನೆಲ್ಲಾ ಒಡೆಯುತ್ತಾರೆ ಕಾದು ನೋಡಬೇಕು. ಗೋಪುರದ ರೀತಿ ಕಾಣುವುದೆಲ್ಲಾ ಸಾಬ್ರುದು ಅನ್ನೊದಾದ್ರೆ ನಾವೇನ್ ಮಾಡೊದು. ಆ ಶೆಲ್ಟರ್ ಯಾರು ವಿನ್ಯಾಸ ಮಾಡಿದ್ರು? ಎಂಬುದು ನನಗೆ ಗೊತ್ತಿಲ್ಲ. ಗುಂಬಜ್ ಮಾದರಿಯ ಬಸ್ ನಿಲ್ದಾಣ ಹೊಡೆದು ಹಾಕೋದಾದ್ರೆ. ಅದೆಷ್ಟು ಹೊಡೆದು ಹಾಕ್ತಾರೆ ಹಾಕಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊಡವರಂತೆ ತಮ್ಮ ಸಮುದಾಯದವರ ನರಮೇಧ ಮಾಡಿದ್ರೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡ್ತಿದ್ರಾ? ಪ್ರತಾಪ ಸಿಂಹ

`ಟಿಪ್ಪು ನಿಜ ಕನಸುಗಳು’ ಪುಸ್ತಕದ ವಿರುದ್ಧ ಕೇಸ್:
ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಿಡುಗಡೆಯಾದ ಪುಸ್ತಕ ನನ್ನ ಕೈ ಸೇರಿದೆ. ವಕೀಲ ರಂಗನಾಥ್ ಅವರ ಮೂಲಕ ಮೊಕದ್ದಮೆ ದಾಖಲಿಸ್ತಿವಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿ (PLI) ಸಹ ಹಾಕ್ತೀವಿ. ಎಲ್ಲಿ? ಯಾವಾಗ? ಎಂಬುದನ್ನ ವಕೀಲರು ನೋಡಿಕೊಳ್ತಾರೆ ಎಂದು ತಿಳಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button