ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸೀರೆಯುಟ್ಟು ಮಿಂಚುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಕ್ಯಾಮೆರಾಮೆನ್ ವಿಜಯ್ ದೇವರಕೊಂಡನಾ (Vijay Deverakonda) ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಈ ಫೋಟೋಗೆ ಸುಂದರ ಸಾಲುಗಳ ಕ್ಯಾಪ್ಷನ್ ಕೊಟ್ಟಿರೋ ರಶ್ಮಿಕಾ ʻಈ ಚಿತ್ರಗಳಲ್ಲಿ ಇರೋದೆಲ್ಲ ನನ್ನ ನೆಚ್ಚಿನವು. ಬಣ್ಣ, ವೈಬ್, ಈ ಸ್ಥಳ, ನನಗೆ ಈ ಸೀರೆಯನ್ನು ಉಡುಗೊರೆಯಾಗಿ ನೀಡಿದ ಮಹಿಳೆ, ಛಾಯಾಗ್ರಾಹಕ ಮತ್ತು ಈ ಫೋಟೋದಲ್ಲಿರುವ ಎಲ್ಲವೂ ಬೇರೆಯಾವುದಕ್ಕೂ ಸರಿಸಾಟಿ ಇಲ್ಲದ್ದುʼ ಎಂದು ಬರೆದುಕೊಂಡಿದ್ದಾರೆ.
View this post on Instagram
ಇದು ನಟ ವಿಜಯ್ ದೇವರಕೊಂಡ ಅವರೇ ಕ್ಲಿಕ್ ಮಾಡಿರಬಹುದು. ಸೆಟ್ಟಿಂಗ್ ನೋಡಿದ್ರೆ ವಿಜಯ್ ಅವರ ಮನೆಯಂತೆಯೇ ಇದೆ ಎಂದು ನೆಟ್ಟಿಗರು ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಕೆಲವು ಸಮಯದಿಂದ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಇದೆ. ಇಬ್ಬರೂ ಸಾರ್ವಜನಿಕವಾಗಿ ಈ ವಿಚಾರವನ್ನು ದೃಢಪಡಿಸಿಲ್ಲ. ಇಬ್ಬರೂ ಈ ಹಿಂದೆ ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.
ಏನೇ ಆದ್ರೂ ರಶ್ಮಿಕಾ ನಿಗೂಢ ಛಾಯಾಗ್ರಾಹಕನ ಹೆಸರು ಬಹಿರಂಗಪಡಿಸದಿದ್ದರೂ, ನೆಟ್ಟಿಗರು ಮಾತ್ರ ದೇವರಕೊಂಡ ಅವರೇ ಆ ಛಾಯಾಗ್ರಾಹಕ ಎಂದು ಊಹಿಸಿದ್ದಾರೆ.