ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ದೀಪಿಕಾ ಆರೋಗ್ಯ ಏರುಪೇರಾಗಿತ್ತು. ಚೇತರಿಸಿದ ಬಳಿಕವೇ ಶೂಟಿಂಗ್‌ಗೆ ಬಂದು ಕ್ಯಾಮೆರಾ ಮುಂದೆ ನಿಂತಿದ್ದರು. ಈಗ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ ಅಶ್ವಿನಿ ದತ್ ದೀಪಿಕಾ ವೃತ್ತಿಪರತೆಗೆ ಭೇಷ್ ಅಂದಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣವು ಭರದಿಂದ ಸಾಗುತ್ತಿದೆ. ಕೆಲ ದಿನಗಳ ಹಿಂದೆ ಶೂಟಿಂಗ್ ವೇಳೆಯಲ್ಲಿ ಉಸಿರಾಟದಲ್ಲಿ ಏರುಪೇರಾಗಿ ದೀಪಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿದ ಬಳಿಕವೇ ಮತ್ತೆ ಶೂಟಿಂಗ್‌ಗೆ ಹಾಜರ್ ಆಗಿದ್ದರು. ಆರೋಗ್ಯದ ಸ್ಥಿತಿ ಗತಿ ಹೇಗೆ ಇದ್ದರೂ ಬ್ರೇಕ್ ತೆಗೆದುಕೊಳ್ಳದೇ ಮತ್ತೆ ಚಿತ್ರೀಕರಣಕ್ಕೆ ಹಾಜಾರಾದ ದೀಪಿಕಾ ನಡೆಗೆ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ ಅಶ್ವಿನಿ ದತ್ ಭೇಷ್ ಎಂದಿದ್ದಾರೆ. ಇದನ್ನೂ ಓದಿ: ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?
ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕಾನ್ ಫೆಸ್ಟಿವಲ್‌ಗೆ ಜ್ಯೂರಿಯಾಗಿ ಕನ್ನಡತಿ ದೀಪಿಕಾ ಭಾಗವಹಿಸಿ ಸೈ ಎನಿಸಿಕೊಂಡಿದ್ದರು. ಇದಾದ ಬಳಿಕ ಪ್ರಾಜೆಕ್ಟ್ ಕೆ ಶೂಟಿಂಗ್‌ಗೆ ಬಂದಿಳಿದಿದ್ದರು. ಬ್ರೇಕ್ ಇಲ್ಲದೆ ಕೆಲಸ ಮಾಡಿದ ನಿಮಿತ್ತ ದೀಪಿಕಾ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗಿತ್ತು. ಚಿತ್ರತಂಡವನ್ನು ಕಾಯಿಸಬಾರದು ಎಂಬ ಉದ್ದೇಶದಿಂದ ದೀಪಿಕಾ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಇದೀಗ ದೀಪಿಕಾ ಕೆಲಸದ ಭದ್ದತೆಗೆ ಭೇಷ್ ಅಂತಿದ್ದಾರೆ.
Live Tv