Connect with us

Bengaluru City

ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ ‘ದಿಯಾ’ ಚಿತ್ರ

Published

on

6-5=2 ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ನಿರ್ದೇಶಕ ಅಶೋಕ್ ಕೆ.ಎಸ್. ಆರು ವರ್ಷಗಳ ಬಳಿಕ ಮತ್ತದೇ ಹುಮ್ಮಸ್ಸಿನಿಂದ ಬಂದಿದ್ದಾರೆ.

ಅಶೋಕ್ ಈ ಬಾರಿ ‘ದಿಯಾ’ ಎನ್ನುವ ರೋಮ್ಯಾಂಟಿಕ್ ಅಂಡ್ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್‍ನೊಂದಿಗೆ ಬಂದಿದ್ದಾರೆ. ಈ ಬಾರಿಯೂ ಹೊಸ ತಂಡದ ಜೊತೆ ಬಂದಿರೋದು ವಿಶೇಷ. ‘ದಿಯಾ’ ಚಿತ್ರದ ಸ್ಯಾಂಪಲ್‍ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದ್ದು, ಫೆಬ್ರವರಿ 7ಕ್ಕೆ ದಿಯಾ ಚಿತ್ರ ಬಿಡುಯಾಗುತ್ತಿದೆ.

ದೀಕ್ಷಿತ್, ಖುಷಿ, ಪೃಥ್ವಿ ಅಂಬರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಪವಿತ್ರ ಲೋಕೇಶ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್ ನೋಡ್ತಿದ್ರೆ ಟ್ರಾಯಂಗಲ್ ಲವ್ ಸ್ಟೋರಿ ಚಿತ್ರದಲ್ಲಿದೆ ಎನ್ನೋದು ಗೊತ್ತಾಗುತ್ತೆ. ಚಿತ್ರದ ಟ್ಯಾಗ್ ಲೈನ್ ‘ಲೈಫ್ ಈಸ್ ಫುಲ್ ಆಫ್ ಸಪ್ರ್ರೈಸಸ್’ ಎಂದಿದ್ದು, ಟ್ರೈಲರ್ ನಲ್ಲೂ ಈ ಝಲಕ್ ಇರೋ ಕುತೂಹಲಕಾರಿ ಅಂಶಗಳು ಕಾಣಸಿಗುತ್ತೆ. ಸಖತ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿರುವ ಚಿತ್ರದ ತುಣುಕುಗಳು ನಿರೀಕ್ಷೆಯನ್ನು ಮೂಡಿಸಿದೆ.

6-5=2 ಚಿತ್ರಕ್ಕೆ ಬಂಡವಾಳ ಹೂಡಿದ್ದ ಕೃಷ್ಣ ಚೈತನ್ಯ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ವಿಶಾಲ್ ವಿಠಲ್, ಸೌರಭ್ ವಾಘ್ ಕ್ಯಾಮೆರಾ ಕೈಚಳಕ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಫೆಬ್ರವರಿ 7ಕ್ಕೆ ‘ದಿಯಾ’ ಚಿತ್ರ ಬಿಡುಗಡೆಯಾಗುತ್ತಿದ್ದು ಈ ಚಿತ್ರಮಂದಿರದಲ್ಲಿ ಕಮಾಲ್ ಮಾಡುತ್ತಾ ಕಾದು ನೋಡಬೇಕು.

Click to comment

Leave a Reply

Your email address will not be published. Required fields are marked *