Dharwad
ಒಂದೂವರೆ ತಿಂಗಳ ಹಿಂದೆ ಸೇನೆಗೆ ಆಯ್ಕೆ – ತರಬೇತಿ ಹಂತದಲ್ಲಿಯೇ ಸಾವು

ಧಾರವಾಡ: ಈಗಷ್ಟೇ ಒಂದೂವರೆ ತಿಂಗಳ ಹಿಂದೆ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ, ಧಾರವಾಡದ ಯುವ ಯೋಧ ತರಬೇತಿ ಹಂತದಲ್ಲಿ ನಡೆದ ಅವಘಡದಿಂದ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ನಾಗಪುರದ ಸೇನಾ ಕ್ಯಾಂಪ್‍ನಲ್ಲಿ ತರಬೇತಿ ಪಡೆಯುತ್ತಿದ್ದ, ಧಾರವಾಡ ತಾಲೂಕಿನ ನಿಗದಿ ಗ್ರಾಮದ 20 ವರ್ಷದ ಮಹೇಶ್ ಶಿಂಗನಹಳ್ಳಿ ಸಾವನ್ನಪ್ಪಿದ್ದಾರೆ. ತರಬೇತಿ ವೇಳೆ ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಒಂದೂವರೆ ತಿಂಗಳ ಹಿಂದಷ್ಟೇ ಸೇನೆಗೆ ಆಯ್ಕೆಯಾಗಿ ನಾಗಪುರಕ್ಕೆ ಹೋಗಿದ್ದರು. ಕರ್ತವ್ಯಕ್ಕೆ ಹಾಜರಾಗುವ ಮುಂಚೆಯೇ ಶವವಾಗಿ ತವರಿಗೆ ಆಗಮಿಸುತ್ತಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಮೂಡಿದೆ. ಇಂದು ಸ್ವಗ್ರಾಮ ನಿಗದಿಗೆ ಮಹೇಶ್ ಪಾರ್ಥಿವ ಶರೀರ ಆಗಮಿಸಲಿದೆ.
