ತುಮಕೂರು: ಧರ್ಮಸ್ಥಳ ರ‍್ಯಾಲಿ (Dharmasthala Car Rally) ವೇಳೆ ಕಾರು ಅಪಘಾತದಿಂದಾಗಿ ಪಾದಚಾರಿ ಸಾವನಪ್ಪಿದ ಘಟನೆ ಕುಣಿಗಲ್‌ನ (Kunigal) ಯಡಿಯೂರಿನಲ್ಲಿ ನಡೆದಿದೆ.
ಶಾಸಕ ರಾಮಮೂರ್ತಿ (CK Ramamurthy) ಹಾಗೂ ಬೆಂಬಲಿಗರಿಂದ ನಡೆಯುತ್ತಿದ್ದ ಕಾರು ರ‍್ಯಾಲಿಯಲ್ಲಿ ರಾಮಮೂರ್ತಿ ಸಹೋದರ ಮುರಳಿ ಹೋಗುತ್ತಿದ್ದ ವಾಹನ ಪಾದಚಾರಿಗೆ ತಗುಲಿದೆ. ಪರಿಣಾಮ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಪಾದಾಚಾರಿ ವಾಸುದೇವಮೂರ್ತಿ(55) ಅಸುನೀಗಿದ್ದಾನೆ. ಇದನ್ನೂ ಓದಿ: ತಹಶೀಲ್ದಾರ್ ಕಚೇರಿಗೆ ರೈತರ ಮುತ್ತಿಗೆ – ಹಾನಿಯಾದ ಬೆಳೆಗಳಿಗೆ ಪರಿಹಾರಕ್ಕೆ ಆಗ್ರಹ
ಧರ್ಮಸ್ಥಳ ವಿರುದ್ಧ ಅಪಪ್ರಚಾರ ವಿರೋಧಿಸಿ ಶಾಸಕ ರಾಮಮೂರ್ತಿ ಕಾರು ರ‍್ಯಾಲಿ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನೂರಾರು ಕಾರುಗಳಲ್ಲಿ ರ‍್ಯಾಲಿಯಲ್ಲಿ ಹೋಗುತ್ತಿತ್ತು. ಘಟನೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾವೇರಿ | ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್ ಬರ್ಬರ ಹತ್ಯೆ – ಲಾಂಗ್‌ಡ್ರೈವ್ ಹೋಗಿ ಬರುತ್ತೇನೆ ಅಂದಾತ ಶವವಾಗಿ ಪತ್ತೆ