ಮಂಗಳೂರು: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್ ಚಿನ್ನಯ್ಯನ (Maskman Chinnaiah) ಬಂಧನವಾದ ಬೆನ್ನಲ್ಲೇ ಧರ್ಮಸ್ಥಳ ದೇವಸ್ಥಾನದ (Dharmasthala Temple) ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ಶಿವ ರುದ್ರತಾಂಡವ ಮಾಡುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಲಾಗಿದೆ.
ಧರ್ಮ ವಿಜಯದ ಸಂಕೇತವಾಗಿ ಧರ್ಮಸ್ಥಳ ದೇವಸ್ಥಾನದ ಹಿಂದೆ ಶಿವ ರುದ್ರತಾಂಡವದ (Shiva Rudra Tandav) ಫೋಟೋ ಅನಾವರಣವಾಗಿದೆ. ಇದನ್ನೂ ಓದಿ: ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ: ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ ದೇವರ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಷಡ್ಯಂತ್ರ ಮಾಡಿ ಗ್ಯಾಂಗ್ ಸುಳ್ಳಿನ ಕೋಟೆ ಕಟ್ಟಿತ್ತು. ಒಂದೊಂದೇ ಸುಳ್ಳಿನ ಕೋಟೆಗಳು ಕಳಚಿ ಬಿದ್ದು ಷಡ್ಯಂತ್ರ ಮಾಡುತ್ತಿದವರು ಬಂಧನವಾಗುತ್ತಿದ್ದಂತೆ ಆಡಳಿತ ಮಂಡಳಿ ಶಿವರುದ್ರ ತಾಂಡವದ ಫೋಟೋ ಹಾಕಿ ನಮೋ ಮಂಜುನಾಥ ಎಂದು ಬರೆದು ಅಪಪ್ರಚಾರ ಮಾಡಿದವರಿಗೆ ಸಂದೇಶ ಕಳುಹಿಸಿದೆ. ಇದನ್ನೂ ಓದಿ: ಶಿವ ತಾಂಡವ ನೃತ್ಯ ಮಾಡಿದ್ದು ಯಾಕೆ?
ಏನಿದರ ಸಂದೇಶ?
ಶಿವ ರುದ್ರ ತಾಂಡವ ಸಂತೋಷ ಮತ್ತು ಭಾವಪರಾವಶತೆಯನ್ನು ಕೋಪವನ್ನು ಸಂಕೇತಿಸುತ್ತದೆ. ಅಧರ್ಮದ ವಿನಾಶವನ್ನು , ಅಹಂಕಾರದ ನಾಶವನ್ನು ಶಿವರುದ್ರತಾಂಡವ ಸೂಚಿಸುತ್ತದೆ. ಢಮರುಗ ಹಿಡಿದ ರೌದ್ರತೆ ತೋರುವ ಶಿವನ ಉಗ್ರ ಮತ್ತು ವಿನಾಶಕಾರಿ ಸ್ವರೂಪವನ್ನು ಬಿಂಬಿಸುತ್ತದೆ.