ಅಣ್ಣಾವ್ರ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈಗಾಗಲೇ `ನಿನ್ನ ಸನಿಹಕೆ’ ಚಿತ್ರದ ಮೂಲಕ ಧನ್ಯಾ ರಾಮ್‌ಕುಮಾರ್ ಎಂಟ್ರಿ ಕೊಟ್ಟಾಗಿದೆ. ಸ್ಯಾಂಡಲ್‌ವುಡ್‌ನಲ್ಲೇ ಧನ್ಯಾಗೆ ಒಳ್ಳೆಯ ಅವಕಾಶಗಳು ಅರಸಿ ಬರುತ್ತಿರಬೇಕಾದರೆ, ತೆಲುಗು, ತಮಿಳು ಚಿತ್ರರಂಗದಿಂದ ನಟಿ ಧನ್ಯಾಗೆ ಬುಲಾವ್ ಬರುತ್ತಿದೆ.
`ನಿನ್ನ ಸನಿಹಕೆ’ ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಗುರುತಿಸಿಕೊಂಡ ನಟಿ, ಮೊದಲ ಚಿತ್ರದಲ್ಲೇ ತಾನೆಂತಹ ಕಲಾವಿದೆ ಅಂತಾ ಪ್ರೂವ್ ಮಾಡಿದ್ದರು. ಈ ಚಿತ್ರದ ನಂತರ ಧನ್ಯಾಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಸಖತ್ ಚ್ಯೂಸಿಯಾಗಿ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ಕೊಡ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲೂ ಧನ್ಯಾ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸೌತ್ ಅಂಗಳದಲ್ಲೂ ತಾನು ಮಿಂಚಬೇಕು ಅಂತಾ ಧನ್ಯಾ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಡಾ.ರಾಜ್ ಅವರ ಮೊಮ್ಮಗಳು ಧನ್ಯಾಗೆ ಸೌತ್ ಸಿನಿ ಇಂಡಸ್ಟ್ರಿಯಿಂದ ಸಿನಿಮಾ ಮಾಡಲು ಬುಲಾವ್ ಬಂದಿದೆ. ಅಳೆದು ತೂಗಿ ಕಥೆ ಕೇಳಿ ಒಂದಿಷ್ಟು ಚಿತ್ರಗಳಿಗೆ ಓಕೆ ಅಂದಿದ್ದಾರೆ. ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲೂ ಬೇರೆ ಬೇರೆ ಸಿನಿಮಾ ಮಾಡುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಅಧಿಕೃತ ಮಾಹಿತಿಯನ್ನು ಆಯಾ ಚಿತ್ರತಂಡದವರೇ ರಿವೀಲ್ ಮಾಡಲಿದ್ದಾರೆ. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ
ಕನ್ನಡದ `ಕಾಲಾಪತ್ಥರ್’ ಚಿತ್ರದಲ್ಲೂ ನಟಿಸಿರುವ ಧನ್ಯಾ ಈಗ ದಕ್ಷಿಣ ಭಾರತದ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಒಂದೊಳ್ಳೆ ಸಿನಿಮಾದ ಮೂಲಕ ಧನ್ಯಾ ಸೌತ್ ಸಿನಿಪ್ರೇಕ್ಷಕರ ಮನ ಗೆಲ್ಲುತ್ತಾರಾ ಅಂತಾ ಕಾದುನೋಡಬೇಕಿದೆ.