ರಾಮನಗರ: ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ (Pendrive Case) ನಾಲ್ವರು ಸಚಿವರು ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ವಕೀಲ ದೇವರಾಜೇಗೌಡ (Devarajegowda) ಆರೋಪ ವಿಚಾರಕ್ಕೆ ರಾಮನಗರದಲ್ಲಿ (Ramanagara) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಪ್ರತಿಕ್ರಿಯೆ ನೀಡಿದ್ದಾರೆ.
ದೇವರಾಜೇಗೌಡ ಸಕ್ರಿಯ ಬಿಜೆಪಿ (BJP) ಕಾರ್ಯಕರ್ತ. ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿರುವ ವ್ಯಕ್ತಿ. ಅವರು ರಾಜಕೀಯದಲ್ಲಿ ಇಲ್ಲದೇ ಇದ್ದಿದ್ದರೆ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳಬಹುದಿತ್ತು. ಆದರೆ ಈಗ ಅವರ ಹೇಳಿಕೆ ರಾಜಕೀಯ ಪ್ರೇರಿತ. ದೇವರಾಜೇಗೌಡ ಹಿಂದೆ ರೇವಣ್ಣ ಕುಟುಂಬದ ಬಗ್ಗೆ ಮಾತನಾಡಿದ್ದು, ವೀಡಿಯೋ ಬಿಟ್ಟಿದ್ದನ್ನು ನಾನು ಗಮನಿಸಿದ್ದೇನೆ. ಇದು ಅವರಿಬ್ಬರ ಪರ್ಸನಲ್ ವಿಚಾರ. ಆದರೆ ಅದನ್ನು ರಾಜ್ಯ ಮಟ್ಟಕ್ಕೆ ತಂದಿದ್ದಾರೆ ಎಂದರು. ಇದನ್ನೂ ಓದಿ: ಕಿರ್ಗಿಸ್ತಾನ್‌ನಲ್ಲಿ ಭಾರತ, ಪಾಕಿಸ್ತಾನ ವಿದ್ಯಾರ್ಥಿಗಳ ಟಾರ್ಗೆಟ್ ಮಾಡಿ ದಾಳಿ
Advertisement
Advertisement
ಇನ್ನೂ ಡಿಕೆಶಿಯಿಂದ 100 ಕೋಟಿ ಆಫರ್ ಆರೋಪ ವಿಚಾರದ ಕುರಿತು ಮಾತನಾಡಿ, ಇದರ ಬಗ್ಗೆ ದೇವರಾಜೇಗೌಡ ಅಥವಾ ಶಿವಕುಮಾರ್ ಅವರನ್ನೇ ಕೇಳಿ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಈ ಇಡೀ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಕೇವಲ ಹೊಳೆನರಸೀಪುರದಲ್ಲಿ ಸುತ್ತುತ್ತಿರುವ ವಿಚಾರ. ರೇವಣ್ಣ, ಪ್ರಜ್ವಲ್ ಹಾಗೂ ದೇವೇಗೌಡರ ಜಗಳ ಇದು. ಅವರ ಜಗಳವನ್ನ ಬೀದಿಗೆ ತಂದಿದ್ದಾರೆ ಎಂದು ಹೇಳಿದರು. ದೇವರಾಜೇಗೌಡ ಜೈಲಿನಿಂದ ಬಂದ ಬಳಿಕ ಸರ್ಕಾರ ಬೀಳುತ್ತೆ ಎಂಬ ವಿಚಾರವಾಗಿ ಮಾತನಾಡಿ, ಅವರು ಮೊದಲು ಜೈಲಿನಿಂದ ಬರಲಿ. ಆಮೇಲೆ ಸರ್ಕಾರ ಬೀಳುತ್ತಾ? ಇಲ್ವಾ ಅನ್ನೋದನ್ನು ನೋಡೊಣ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ದೇವರಾಜೇಗೌಡನಿಗೆ ತಲೆ ಕೆಟ್ಟಿದೆ, ನನ್ನ ಹೆಸರನ್ನು ಉಪಯೋಗಿಸಿ ಮಾರ್ಕೆಟ್ ಮಾಡ್ಕೊತ್ತಾರೆ: ಡಿಕೆಶಿ
Advertisement