ಗದಗನಲ್ಲಿ ಅಂತರಾಜ್ಯ ಕಳ್ಳನ ಬಂಧನ

Public TV
2 Min Read
police 3 1

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಗಳ ಜಾಡು ಹಿಡಿದು ಹೊರಟಿದ್ದ ಪೊಲೀಸರು ಅಂತರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೂನ್ 20 ಮತ್ತು ಜೂನ್ 25 ರಂದು ಲಕ್ಷ್ಮೇಶ್ವರ ಪಟ್ಟಣದ ಹೊರವಲಯದ ರಂಭಾಪುರಿ ನಗರ ಮತ್ತು ಕೆಂಪಿಗೆರೆ ಪ್ರದೇಶದಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಜೂನ್ 20 ರಂದು ರಾತ್ರಿ ಲಕ್ಷ್ಮೇಶ್ವರದ ರಂಭಾಪುರಿ ನಗರದ ಸುಲೇಮಾನ್ ಭಾಷಾಸಾಬ ಗತ್ತರಗಿ ಎಂಬುವವರ ಮನೆಯ ಬೀಗ ಮುರಿದು ತಿಜೋರಿಯಲ್ಲಿದ್ದ 15 ಗ್ರಾಮ್ ಚಿನ್ನಾಭರಣ ಹಾಗೂ 25 ಸಾವಿರ ನಗದು ದೋಚಲಾಗಿತ್ತು. ಇದನ್ನೂ ಓದಿ: ಭಾಷೆ, ಸಂಸ್ಕೃತಿಯಿಂದಲೇ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು: ಟಿ.ಎಸ್.ನಾಗಾಭರಣ

police 2 2

ಮತ್ತೊಂದು ಪ್ರಕರಣದಲ್ಲಿ ಜೂನ್ 26 ರಂದು ಲಕ್ಷ್ಮೇಶ್ವರದ ಕೆಂಪಗೇರಿಯ ನಿಂಗಪ್ಪ ಗೌಡನಾಯ್ಕರ್ ಅವರ ಮನೆಯ ಬೀಗ ಮುರಿದು 8 ಗ್ರಾಮ್ ತೂಕದ ಚಿನ್ನದ ಜುಮಕಿ ಹಾಗೂ 25 ಸಾವಿರ ನಗದು ದೋಚಲಾಗಿತ್ತು.

ಈ ಎರಡು ಪ್ರತ್ಯೇಕ ಪ್ರಕರಣಗಳು ಲಕ್ಷ್ಮೇಶ್ವರ ಠಾಣೆಯಲ್ಲಿ ದಾಖಲಾಗಿದ್ದವು. ಪ್ರಕರಣದ ಜಾಡು ಹಿಡಿದ ಪಿಎಸ್‍ಐ ಪ್ರಕಾಶ್ ಡಿ. ನೇತೃತ್ವದ ಪೊಲೀಸ್ ತಂಡ, ಎಸ್‍ಪಿ ಯತೀಶ್, ಡಿವೈಎಸ್‍ಪಿ ಶಿವಾನಂದ ಪವಾಡಶೆಟ್ಟಿ ಸಿಪಿಐ ವಿಕಾಸ್ ಲಮಾಣಿ ಮಾರ್ಗದರ್ಶನದಲ್ಲಿ ಹಗಲೂ ರಾತ್ರಿ ಕಳ್ಳರ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಇದನ್ನೂ ಓದಿ: ನಿಫಾ ತಡೆಯಲು ಮುನ್ನೆಚ್ಚೆರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಯಲ್ಲಿ ಜಾಗೃತಿ

ಕಳ್ಳತನ ಬಳಿಕ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ 25 ವರ್ಷದ ಅಶೋಕ್ ಅಲಿಯಾಸ್ ಶ್ರೀನಿವಾಸ ಕಾಂಚಿಬೋಸಲೆ ಇಂದು ಗದಗ ಹೊಸ ಬಸ್ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದರು. ಆತನ ಚಲನವಲನಗಳನ್ನು ಗಮನಿಸಿ ಬಂಧಿಸಿ, ಸತ್ಯವನ್ನು ಬಾಯಿ ಬಿಡಿಸಿದ್ದಾರೆ.

police 2 1

ಬಂಧಿತನಿಂದ 1.50 ಲಕ್ಷ ರೂ. ಮೌಲ್ಯದ 33 ಗ್ರಾಂ ಬಂಗಾರದ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಲಾಗಿದೆ. ಜೊತೆಗೆ ಕಳೆದ ಜುಲೈನಲ್ಲಿ ಕಳ್ಳತನವಾಗಿದ್ದ ಇಬ್ಬರು ಮನೆಯವರ ಆಭರಣ ಸಮೇತ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ- ಮೂವರಿಗೆ ಗಾಯ

ಪಿಎಸ್.ಐ ಪ್ರಕಾಶ್ ಡಿ, ಎಎಸ್‍ಐಗಳಾದ ವೈ.ಎಸ್.ಕೂಬಿಹಾಳ, ಎಸ್.ಎಚ್.ಬೆಟಗೇರಿ, ಸಿಬ್ಬಂದಿ ಜಿ.ಎಂ.ಬೂದಿಹಾಳ, ಎಂ.ಡಿ.ಲಮಾಣಿ, ಎಂ.ಬಿ.ವಡ್ಡಟ್ಟಿ, ಎನ್.ಡಿ.ಹುಬ್ಬಳ್ಳಿ, ಎಸ್.ಎಫ್.ತಡಸಿ, ಎನ್.ಎಚ್.ಮಠಪತಿ, ರಾಮು ನಾಯಕ್, ಕೆ.ಬಿ.ಹುಲಗೂರ ಅವರನ್ನೊಳಗೊಂಡ ತಂಡ ಕಳ್ಳರ ಪತ್ತೆ ಮಾಡಲು ಯಶಸ್ವಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *