Bengaluru City

ಭಾಷೆ, ಸಂಸ್ಕೃತಿಯಿಂದಲೇ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು: ಟಿ.ಎಸ್.ನಾಗಾಭರಣ

Published

on

Share this

ಬೆಂಗಳೂರು: ಭಾಷೆ ಮತ್ತು ಸಂಸ್ಕೃತಿಯಿಂದಲೇ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಹೇಳಿದ್ದಾರೆ.

ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೊಧನಾ ಪ್ರತಿಷ್ಠಾನದ ಕಾರ್ಯಗಳಿಗೆ ಸೆ.9 ಗುರುವಾರದಂದು ಟಿ.ಎಸ್.ನಾಗಾಭರಣ ಚಾಲನೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಂದಾಗನ್ನಡದ ಮೂಲ ಪರಿಕಲ್ಪನೆಯ ಅಧ್ಯಯನದಲ್ಲಿ ನಾಯರಿ ಜನಾಂಗ ಬಹುಮುಖ್ಯವಾಗಲಿದೆ. ಕುಂದಾಗನ್ನಡದ ಮೂಲ ಸ್ವರೂಪದ ಅಂಶಗಳು ದೊರಕುವುದು ನಾಯರಿ ಜನಾಂಗ ಬಳಸುವ ಭಾಷೆಯಿಂದ ಎಂದರು.  ಇದನ್ನೂ ಓದಿ: ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

ಭಾಷೆ ಮತ್ತು ಸಂಸ್ಕೃತಿಯಿಂದಲೇ ಸಮುದಾಯಗಳೆಲ್ಲ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು. ಹೀಗೆ ನಾಯರಿ ಜನಾಂಗದ ಅಸ್ಮಿತೆ ಕುಂದಾಗನ್ನಡದ ಮೂಲ ಭಾಷೆಯಾಗಿದೆ. ಈ ಬಗ್ಗೆ ಸಂಶೋಧನೆಗಳು ನಡೆಯಬೇಕು. ಕುಂದಾಗನ್ನಡದ ಮೂಲ ಅಸ್ಮಿತೆಯ ಸಂಶೋಧನಾ ಕಾರ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪೂರಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ವಿನಾಶದ ಅಂಚಿನಲ್ಲಿರುವ ನಾಯರಿ ಜನಾಂಗದ ಅಸ್ಮಿತೆಯನ್ನು ರಕ್ಷಿಸುವಂತೆ ಕೋರಿ ಮನವಿ ಮಾಡಿದರು. ಇದನ್ನೂ ಓದಿ: ನಿಫಾ ತಡೆಯಲು ಮುನ್ನೆಚ್ಚೆರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಯಲ್ಲಿ ಜಾಗೃತಿ

ಈ ಸಂದರ್ಭದಲ್ಲಿ ಮಾತನಾಡಿದ ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನದ ಸಲಹಾ ನಿರ್ದೇಶಕರಾದ ಗೋಪಾಲಕೃಷ್ಣ ನಾಯರಿ, ಉಡುಪಿ ಜಿಲ್ಲೆಯ ಕುಂದಗನ್ನಡದ ಸಂಸ್ಕøತಿಯಷ್ಟೇ ಮೂಲದ ಮಿತಿಯಿಂದ ಏಕೈಕ ಬುಡಕಟ್ಟಿನ ನಾವು ನಾಯರಿ ಜನಾಂಗದವರಾಗಿದ್ದು, ಸಾಂಖ್ಯಿಕವಾಗಿ ರಾಜ್ಯದಲ್ಲೇ ಸರಿಸುಮಾರು ಮೂರರಿಂದ ನಾಲ್ಕು ಸಾವಿರದ ಗಡಿಯನ್ನು ದಾಟದವರು. ಮೂಲತಃ ಕುಂದಗನ್ನಡದ ಮಾತೃಭಾಷಿಕರಾದ ನಮ್ಮನ್ನು ಮುಖ್ಯ ವಾಹಿನಿಗಳು ಸಾಮಾನ್ಯವಾಗಿ ಕೇರಳದ ನಾಯರ್‍ಗಳು ಎಂದು ಗ್ರಹಿಸಿಕೊಂಡು ಬಂದಿರುವುದು ವಿಷಾದದ ಸಂಗತಿ ಎಂದರು.

ಉಡುಪಿಯ ಹತ್ತಾರು ಕಡೆಗಳಲ್ಲಿ ನಾಯರಿಕೆರೆ, ನಾಯರಿಬೆಟ್ಟು, ನಾಯರಿಹಾಡಿ, ನಾಯರಿಅಡಿ, ನಾಯರಿಮಠ, ನಾಯರಿಕೇರಿ ಮುಂತಾದ ಪ್ರದೇಶ ಸೂಚಿಗಳಿದ್ದು, ಬಹುತೇಕ ಕೇರಳದ ನಾಯರ್‍ಗಳೊಂದಿಗೆ ವಿಕೃತಿ ಸ್ವರೂಪವನ್ನು ಪಡೆದಿರುವುದು ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ರಾಜ್ಯದ ಏಕೈಕ ಸ್ವರ್ಣ ಗೌರಿ ದೇವಾಲಯದಲ್ಲಿಲ್ಲ ಪೂಜೆ, ಪುನಸ್ಕಾರ

ಏನಿದು ನಾಯರಿ?

12ನೇ ಶತಮಾನದ ನನ್ನಿದೇವನು ಉಡುಪಿಯ ನಾಯರಿ ಎಂಬ ಬಂಟನೊಂದಿಗೆ ಕಠ್ಮಂಡುವಿನಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಿ ಪಶುಪತಿ ದೇವಸ್ಥಾನದ ಪ್ರಸಿದ್ಧಿಗೆ ಕಾರಣಕರ್ತನಾಗಿರುವುದನ್ನು ಶಾಸನಗಳ ಸಾಕ್ಷ್ಯಗಳೊಂದಿಗೆ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ಅವರು ಪ್ರಸ್ತಾಪಿಸಿರುತ್ತಾರೆ ಎಂದು ಮಾಹಿತಿ ನೀಡಿದರು.

ನಮ್ಮ ಜನಾಂಗದ ಬಗ್ಗೆ ವಸಾಹತು ಭಾರತದಲ್ಲಿ ಸೌತ್ ಕೆನರಾ ಡಿಸ್ಟ್ರಿಕ್ಟ್ ನ ಗೆಜೆಟಿಯರ್ ಪ್ರಕಾರ ನಾ-ಯಿರಿ ಎಂದರೆ ಭೂಮಿಯನ್ನು ಉಳುವವನು ಎಂಬರ್ಥ ಇರುವುದಾಗಿ ನಮೂದಿಸಿದೆ. ಭೂಮಿಕಾಣಿಕೆಯ ವಿಷಯದಲ್ಲೂ ನಾಯರಿ ಮೂಲ ಮತ್ತು ದೇವ ಮೂಲವೇ ಪ್ರಧಾನವಾಗಿ ಇರುವುದನ್ನು ಕಾಣುತ್ತೆ. ನಾವು ನಾಯಿರಿಗಳು ಕುಂದಗನ್ನಡದ ಮೂಲ ಅಥವಾ ಆದಿವಾಸಿಗಳೆಂಬುದರಲ್ಲಿ ಸಂಶಯವಿಲ್ಲ. ಕನ್ನಡದ ಕಡಲತೀರದ ಭಾರ್ಗವ ಶಿವರಾಮಕಾರಂತ ಹಾಗೂ ಅವರ ಸಹೋದರ ಕೋ.ಲ.ಕಾರಂತರು ಕೂಡ ಹಲವು ಬಾರಿ ನಮ್ಮನ್ನು ಕನ್ನಡದ್ದೇ ಆದ ವಿಶಿಷ್ಟ ಜನಾಂಗ ಎಂದು ಕರೆದಿರುವುದು ಮತ್ತು ಗುರುತಿಸಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

ಕನ್ನಡಿಗರಾಗಿದ್ದರೂ ಪರಭಾಷಿಕರು!

ಮೂಲತಃ ಕುಂದಗನ್ನಡದ ನಾಡಾಡಿಗಳೇ ಆದ ನಾವು, ಕೇವಲ ನಮ್ಮ ಜನಾಂಗೀಯ ಹೆಸರಿನ ಸಾಮ್ಯತೆಯು ಕೇರಳದ ನಾಡಿಗಂಟಿದೆ. ಈ ಕಾರಣ ನಾವುಗಳು ಕರ್ನಾಟಕದಲ್ಲಿದ್ದು, ನೂರಕ್ಕೆ ನೂರರಷ್ಟು ಕನ್ನಡಿಗರಾಗಿದ್ದರೂ ಪರಭಾಷಿಕರಾಗಿ ಗುರುತಿಸಲ್ಪಡುತ್ತಿರುವುದು ವಿಷಾದದ ಸಂಗತಿ. ನಮ್ಮದು ಮಾತೃ ಪ್ರಧಾನ ಕುಟುಂಬದ ಸಂಸ್ಕøತಿಯಾಗಿದ್ದು, ಸೋದರಿಕೆಯ ಅಳಿ ಸಂತನ. ಬಂಟರಲ್ಲಿರುವ ಅಳಿ ಸಂತನದ ಪರಿಕಲ್ಪನೆಗೂ ನಾಯರಿ ಸಮುದಾಯದಲ್ಲಿರುವ ಸೋದರಿಕೆಯ ಅಳಿ ಸಂತನಕ್ಕೆ ವ್ಯತ್ಯಾಸವಿದೆ ಎಂದು ತಿಳಿಸಿದರು.

ವಿನಾಶದ ಅಂಚಿಗೆ ಸರಿದಿರುವ ನಮ್ಮನ್ನು ನಾಡಾಡಿ ಕನ್ನಡಿಗರನ್ನಾಗಿ ಉಳಿಸಿಕೊಡಲು ಯೋಜಿಸಿ ಅನುಷ್ಠಾನಕ್ಕೆ ತಂದು ಕನ್ನಡದ್ದೇ ಆದ ವಿಶಿಷ್ಟ ಅಸ್ಮಿತೆಯನ್ನು ನಮ್ಮೊಂದಿಗೆ ಕಾಪಾಡಿಕೊಡಬೇಕೆಂದು ಮನವಿ ಮಾಡಿದರು. ಇದನ್ನೂ ಓದಿ: ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

ಕನ್ನಡಪರ ಚಿಂತಕರಾದ ರಾ.ನಂ.ಚಂದ್ರಶೇಖರ್, ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಕೆ.ಶಂಕರ್, ವಿ.ಸೂರ್ಯಕಲಾ, ಸಹ ಕಾರ್ಯದರ್ಶಿಗಳಾದ ಕೆ.ಎಂ.ರಾಮಚಂದ್ರ ನಾಯರಿ, ಸಂಪಾದನ-ದಾಖಲಾ ಮಂಡಳಿಯ ವೆಂಕಟೇಶ್ ಜಿ.ನಾಯರಿ ಅವರು ಈ ವೇಳೆ ಹಾಜರಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications