ಬಾಳೆಕಾಯಿಯ ಸಿಪ್ಪೆ ಎಂದಿಗೂ ಅಡುಗೆಯಲ್ಲಿ ಉಪಯೋಗಕ್ಕೆ ಬರಲ್ಲ ಎಂದು ಹೆಚ್ಚಿನವರು ಅಂದುಕೊಂಡಿರಬಹುದು. ಆದರೆ ಇದೇ ಸಿಪ್ಪೆ ಬಳಸಿ ರುಚಿಕರವಾದ ಚಟ್ನಿ ಮಾಡಬಹುದು. ಬಾಳೆಕಾಯಿ ಅಡುಗೆಯಲ್ಲಿ ಯಾವಾಗಲೂ ಉಪಯೋಗಕ್ಕೆ ಬರುತ್ತದೆ. ಪಲ್ಯ ಇಲ್ಲವೇ ಚಿಪ್ಸ್‌ಗಳನ್ನು ತಯಾರಿಸಿರುತ್ತೀರಿ. ಇನ್ನು ಮುಂದೆ ಅದರ ಸಿಪ್ಪೆಯನ್ನು ಎಸೆಯದೇ ಒಮ್ಮೆ ಚಟ್ನಿಯೂ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಬಾಳೆಕಾಯಿ ಸಿಪ್ಪೆ – 1 ಕಪ್
ಜೀರಿಗೆ – 1 ಟೀಸ್ಪೂನ್
ಒಣ ಕೆಂಪು ಮೆಣಸಿನಕಾಯಿ – 3
ಅರಿಶಿನ ಪುಡಿ – 1 ಟೀಸ್ಪೂನ್
ನೀರು – 1 ಕಪ್
ಹುಣಿಸೆ ಹಣ್ಣಿನ ಪೇಸ್ಟ್ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1 ಟೀಸ್ಪೂನ್
ಎಣ್ಣೆ – ಅರ್ಧ ಟೀಸ್ಪೂನ್ ಇದನ್ನೂ ಓದಿ: ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್
Advertisement
Advertisement
ಮಾಡುವ ವಿಧಾನ :
* ಮೊದಲಿಗೆ ಬಾಳೆಕಾಯಿಯ ಸಿಪ್ಪೆಯನ್ನು ಅರಿಶಿನ ನೀರಿನಲ್ಲಿ 5 ನಿಮಿಷ ನೆನೆಸಿಡಿ.
* ಬಳಿಕ 1 ಕಪ್ ನೀರಿನೊಂದಿಗೆ ಪ್ರೆಷರ್ ಕುಕ್ಕರ್‌ನಲ್ಲಿ 1 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಒಂದು ಪ್ಯಾನ್ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿ, ಜೀರಿಗೆ, ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
* ಬಳಿಕ ಬಾಳೆಕಾಯಿಯ ಸಿಪ್ಪೆ ಸೇರಿಸಿ ಡ್ರೈ ಆಗುವವರೆಗೆ 3-4 ನಿಮಿಷ ಹುರಿದುಕೊಳ್ಳಿ.
* ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಿಸಿ.
* ಈಗ ಮಿಕ್ಸರ್ ಜಾರ್‌ನಲ್ಲಿ ಹುರಿದ ಬಾಳೆಕಾಯಿ ಸಿಪ್ಪೆ, ಹುಣಸೆಹಣ್ಣಿನ ಪೇಸ್ಟ್, ಸಕ್ಕರೆ, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
* ಇದೀಗ ಬಾಳೆಕಾಯಿ ಸಿಪ್ಪೆಯ ಚಟ್ನಿ ತಯಾರಾಗಿದ್ದು, ಊಟ ಅಥವಾ ಯಾವುದೇ ತಿಂಡಿಯೊಂದಿಗೆ ಆನಂದಿಸಿ. ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ
Advertisement
Web Stories