ನವದೆಹಲಿ: ಮಾಲಿನ್ಯದ ಬಗ್ಗೆ ಎಚ್ಚರಿಕೆ ನೀಡುವಂತಹ ಸಂದೇಶಗಳು ಈವರೆಗೆ ಚೀನಾದ ಬೀಜಿಂಗ್‍ಗೆ ಸೀಮಿತವಾಗಿತ್ತು. ಇನ್ಮುಂದೆ ಭಾರತದ ರಾಜಧಾನಿ ದೆಹಲಿಯಲ್ಲಿ ಇದು ಕಾಮನ್ ಆಗಲಿದೆ.
ಮುಂದಿನ ಚಳಿಗಾಲದಿಂದ ದೆಹಲಿ ಜನತೆಗೆ ಮಾಲಿನ್ಯದ ಪ್ರಮಾಣದ ಬಗ್ಗೆ ಮತ್ತು ಆರೋಗ್ಯ ಸಲಹೆಗಳನ್ನೊಳಗೊಂಡ ಇ-ಮೇಲ್ ಮತ್ತು ಎಸ್‍ಎಮ್‍ಎಸ್ ಗಳು ಬರಲಿವೆ. ಸುಪ್ರೀಂ ಕೋರ್ಟ್ ನಿಯೋಜಿಸುವ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಪ್ರಾಧಿಕಾರ ಈ ಎಚ್ಚರಿಕೆಗಳನ್ನ ಕಳಿಸಲಿದ್ದು, ಹೆಚ್ಚಿನ ಪ್ರಮಾಣದ ಮಾಲಿನ್ಯವಿರುವ ಪ್ರದೇಶಗಳಿಂದ ದೂರವಿರಲು ಜನರಿಗೆ ಸಹಾಯಕವಾಗಲಿದೆ.
Advertisement
Advertisement
ವಾಯು ಗುಣಮಟ್ಟ ಕಳಪೆಯಾಗಿರೋ ಸಂದರ್ಭಗಳಲ್ಲಿ ದಿನಪತ್ರಿಕೆ, ಟಿವಿ ಮತ್ತು ರೇಡಿಯೋಗಳಲ್ಲೂ ಎಚ್ಚರಿಕೆ ನೀಡಲಾಗುತ್ತದೆ. ಇದರಿಂದ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರಿಗೆ ನೆರವಾಗಲಿದೆ.
Advertisement
ಪ್ರಸ್ತುತ ಮಾಲಿನ್ಯದ ಬಗೆಗಿನ ಮಾಹಿತಿ ಏರ್ ಕ್ವಾಲಿಟಿ ಇಂಡೆಕ್ಸ್ ಮೂಲಕ ಲಭ್ಯವಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ), ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಪ್ರಾಧಿಕಾರ(ಇಪಿಸಿಎ) ಹಾಗೂ ಸಿಸ್ಟಮ್ ಅಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್‍ಕಾಸ್ಟಿಂಗ್ ಅಂಡ್ ರಿಸರ್ಚ್(ಎಸ್‍ಎಎಫ್‍ಎಆರ್)ನ ವೆಬ್‍ಸೈಟ್‍ಗಳೂ ಕೂಡ ಮಾಲಿನ್ಯ ಪ್ರಮಾಣಕ್ಕೆ ಅನುಗುಣವಾಗಿ ಆರೋಗ್ಯ ಸಲಹೆಗಳನ್ನ ನೀಡುತ್ತಿವೆ.
Advertisement
ಬೀಜಿಂಗ್‍ನಲ್ಲಿ ಸಾಮಾಜಿಕ ಜಾಲತಾಣ, ರೇಡಿಯೋ, ಟಿವಿ ಹಾಗೂ ಮೊಬೈಲ್ ಆ್ಯಪ್‍ಗಳ ಮೂಲಕ ಇಂತಹ ಎಚ್ಚರಿಕೆಗಳನ್ನ ಕಳಿಸಲಾಗುತ್ತದೆ. ಭಾರತದಲ್ಲಿ ಅಹಮದಾಬಾದ್ ನಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಯಲ್ಲಿದೆ. ಅಹಮದಾಬಾದ್ ನಾಗರೀಕ ಅಧಿಕಾರಿಗಳು ಸುಮಾರು 1000 ಇ-ಮೇಲ್ ಮತ್ತು ಎಸ್‍ಎಮ್‍ಎಸ್‍ಗಳ ಮೂಲಕ 200 ಕ್ಕೂ ಹೆಚ್ಚು ಶಾಲೆಗಳಿಗೆ ಏರ್ ಕ್ವಾಲಿಟಿ ಇಂಡೆಕ್ಸ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
2015ರಲ್ಲಿ ವಿಶ್ವದಾದ್ಯಂತ ಮಾಲಿನ್ಯದಿಂದ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಈ ವರದಿಯ ಪ್ರಕಾರ 2015ರಲ್ಲಿ ವಿಶ್ವದಾದ್ಯಂತ ಮಾಲಿನ್ಯದಿಂದ 90 ಲಕ್ಷ ಜನ ಸಾವನ್ನಪ್ಪಿದ್ದರೆ ಭಾರತದಲ್ಲೇ 25 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: 2015ರಲ್ಲಿ ಮಾಲಿನ್ಯದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ