ದೆಹಲಿಯಲ್ಲಿ ಭಾರೀ ಮಳೆ – ರಸ್ತೆಗಳಿಗೆ ನುಗ್ಗಿದ ನೀರು, ವಿಮಾನ ಕಾರ್ಯಾಚರಣೆಗೂ ಅಡ್ಡಿ

Public TV
2 Min Read
Delhi Rain

ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ (Delhi NCR) ಪ್ರದೇಶದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಹಲವಾರು ಪ್ರದೇಶಗಳಲ್ಲಿ ವ್ಯಾಪಕ ನೀರು ನಿಂತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೇ ದೆಹಲಿ ವಿಮಾನ ನಿಲ್ದಾಣದಲ್ಲಿಯೂ (Delhi Airport) ವಿಮಾನಗಳ ಕಾರ್ಯಾಚರಣೆಯಲ್ಲಿ ಸಮಸ್ಯೆಯಾಗಿ 209 ನಿರ್ಗಮನ ಮತ್ತು 43 ಆಗಮನದಲ್ಲಿ ವಿಳಂಬವಾಗಿದೆ.

ನಿರಂತರ ಮಳೆಯಿಂದಾಗಿ ನೋಯ್ಡಾ ಮತ್ತು ಗಾಜಿಯಾಬಾದ್‌ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ಪ್ರಗತಿ ಮೈದಾನ, ಡಿಫೆನ್ಸ್ ಕಾಲೋನಿ ಮತ್ತು ಪ್ರೀತ್ ವಿಹಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವ್ಯಾಪಕ ಜಲಾವೃತ ಮತ್ತು ಸಂಚಾರ ದಟ್ಟಣೆ ಉಂಟಾಗಿದೆ. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!

ರಾಜಧಾನಿಯ ಹಲವಾರು ಪ್ರಮುಖ ಮಾರ್ಗಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಡಿಎನ್‌ಡಿ ಫ್ಲೈವೇ, ಮಥುರಾ ರಸ್ತೆ, ವಿಕಾಸ್ ಮಾರ್ಗ, ಐಎಸ್‌ಬಿಟಿ, ಗೀತಾ ಕಾಲೋನಿ ಮತ್ತು ರಾಜಾರಾಮ್ ಕೊಹ್ಲಿ ಮಾರ್ಗ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ನಿಧಾನಗತಿಯಲ್ಲಿ ಸಾಗಿತು. ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

Delhi Rain 2

ಬದರ್ಪುರದಿಂದ ಆಶ್ರಮದವರೆಗೆ ವಾಹನಗಳ ಉದ್ದನೆಯ ಸಾಲುಗಳು ಸಾಲುಗಟ್ಟಿ ನಿಂತಿದ್ದರಿಂದ ಕಚೇರಿ ಪ್ರಯಾಣಿಕರು ಮತ್ತು ಶಾಲಾ ಬಸ್‌ಗಳು ಸಾಕಷ್ಟು ವಿಳಂಬವಾದವು. ಇದನ್ನೂ ಓದಿ: ಇಂದೇ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ‌ 324 ಸ್ಥಾನ ಗೆಲ್ಲುವ ಸಾಧ್ಯತೆ

Share This Article