Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Crime

ದೆಹಲಿ ವ್ಯಕ್ತಿಯ ದೇಹ 8 ಪೀಸ್ ಮಾಡಿ ವೀಡಿಯೋ ರೆಕಾರ್ಡ್ – ಪಾಕಿಸ್ತಾನಕ್ಕೆ ಶೇರ್

Public TV
Last updated: January 16, 2023 9:40 am
Public TV
Share
1 Min Read
delhi terror accused
SHARE

ನವದೆಹಲಿ: ವ್ಯಕ್ತಿಯೊಬ್ಬನ ಹತ್ಯೆ ಮಾಡಿ ದೇಹವನ್ನು 8 ಭಾಗ ಮಾಡಿದ್ದಲ್ಲದೇ ಅದರ ವೀಡಿಯೋ (Video) ಮಾಡಿ ಪಾಕಿಸ್ತಾನಕ್ಕೆ (Pakistan) ಕಳುಹಿಸಿರುವ ಭೀಕರ ಕೃತ್ಯ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು (Delhi Police) ಇಬ್ಬರು ಶಂಕಿತ ಉಗ್ರರನ್ನು (Terrorists) ಬಂಧಿಸಿದ್ದಾರೆ. ವ್ಯಕ್ತಿಯನ್ನು ಕಳೆದ ತಿಂಗಳು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಆತನ ಶಿರಚ್ಛೇದ ಮಾಡಿ, 8 ಭಾಗಗಳನ್ನಾಗಿ ಮಾಡಲಾಗಿದೆ. ಹತ್ಯೆಯಾದ ವ್ಯಕ್ತಿಯ ಪತ್ತೆ ಇನ್ನೂ ಸಿಗದೇ ಹೋಗಿದ್ದು, ಆತನ ವಯಸ್ಸು 21 ಎಂದು ತಿಳಿದುಬಂದಿದೆ. ಆತನ ಕೈಯಲ್ಲಿ ತ್ರಿಶೂಲದ ಹಚ್ಚೆಯೂ ಕಂಡುಬಂದಿದೆ. ಮೃತದೇಹದ ಕೆಲವು ಭಾಗಗಳು ಇನ್ನೂ ನಾಪತ್ತೆಯಾಗಿದ್ದು, ಅದರ ಹುಡುಕಾಟದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ

delhi police

ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡ ಮೂಲದ ಜಗಜಿತ್ ಸಿಂಗ್(29) ಹಾಗೂ ಜಹಾಂಗೀರ್‌ಪುರಿಯ ನೌಶಾದ್(56) ಬಂಧಿತ ಆರೋಪಿಗಳು. ಕೊಲೆಗಡುಕರು ಮೃತದೇಹದ 37 ಸೆಕೆಂಡ್‌ನ ವೀಡಿಯೋ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ವಿಚಾರಣೆಯ ಸಮಯದಲ್ಲಿ ಆರೋಪಿಗಳು ಕೊಲೆಯಾದ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದು, ಬಳಿಕ ಕೊಲೆ ಮಾಡಿದ್ದಾಗಿ ತಿಳಿಸಿದ್ದಾರೆ. ಆತ ಮಾದಕ ವ್ಯಸನಿಯಾಗಿದ್ದರಿಂದ ಸುಲಭವಾಗಿ ಆತನನ್ನು ಕೊಲೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ಆದರೆ ಪೊಲೀಸರಿಗೆ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಪತ್ತೆಯಾಗಿರುವ ಮೃತದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:delhipakistanterroristsvideoದೆಹಲಿಪಾಕಿಸ್ತಾನಭಯೋತ್ಪಾದಕರುವೀಡಿಯೋ
Share This Article
Facebook Whatsapp Whatsapp Telegram

You Might Also Like

Fire Accident Dubai UAE
Latest

ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

Public TV
By Public TV
11 minutes ago
US Senator
Latest

ಅಮೆರಿಕದ ರಾಜಕಾರಣಿಗಳ ಮನೆಯೊಳಗೇ ಗುಂಡಿನ ದಾಳಿ – ಶಾಸಕಿ ಮೆಲಿಸ್ಸಾ, ಪತಿ ಹತ್ಯೆ; ಓರ್ವ ಸಂಸದನಿಗೆ ಗಾಯ

Public TV
By Public TV
12 minutes ago
11A Seat
Latest

ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

Public TV
By Public TV
1 hour ago
Hubballi Reels
Dharwad

ರೀಲ್ಸ್‌ ರಾಜನಿಗೆ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಪೊಲೀಸ್‌ – ನಿಮಗೂ ಈ ಅನುಭವ ಆಗಿರಬೇಕಲ್ವಾ?

Public TV
By Public TV
1 hour ago
CRIME
Crime

ಖಾಸಗಿ ಅಂಗದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ – ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

Public TV
By Public TV
2 hours ago
Heavy Rain
Belgaum

ರಾಜ್ಯದ ಹಲವೆಡೆ ವರುಣಾರ್ಭಟ – ಭಾರೀ ಮಳೆಗೆ ರಸ್ತೆ ಮುಳುಗಡೆ, ಅವಾಂತರ ಸೃಷ್ಟಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?