ನವದೆಹಲಿ: ಯುವಕನೊಬ್ಬ ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಎಳೆದಾಡಿ ಆಕೆಯನ್ನ ಬಲವಂತವಾಗಿ ಕ್ಯಾಬ್‌ನಲ್ಲಿ (Cab) ಕೂರಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ವೀಡಿಯೋ ಜಾಲತಾಣದಲ್ಲಿ (Social Media) ಸದ್ದು ಮಾಡ್ತಿದೆ.
महिला को ज़बरन गाड़ी में डालने और पीटने की इस वायरल वीडियो पर संज्ञान लेते हुए मैं दिल्ली पुलिस को नोटिस जारी कर रही हूँ। इन लोगों के ख़िलाफ़ आयोग सख़्त एक्शन सुनिश्चित करेगा। pic.twitter.com/szAww5ykxD
— Swati Maliwal (@SwatiJaiHind) March 19, 2023
ದೆಹಲಿಯ (New Delhi) ಮಂಗೋಲ್‌ಪುರಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವೀಡಿಯೋವನ್ನ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹಾಗೂ ದೆಹಲಿ ಪೊಲೀಸರಿಗೂ ಟ್ಯಾಗ್ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪನೊಂದಿಗೆ ಸೇರಿ ಹೆಂಡ್ತಿ ಮೇಲೆ ಅತ್ಯಾಚಾರ – ತಂದೆಗೆ 14, ಮಗನಿಗೆ 10 ವರ್ಷ ಜೈಲು
ಈ ಘಟನೆ ಶನಿವಾರ ತಡರಾತ್ರಿ 11:30ರ ಸುಮಾರಿಗೆ ಗುರುಗ್ರಾಮ್‌ನ ಐಎಫ್‌ಎಫ್‌ಸಿಎಒ ಚೌಕ್‌ನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಲಭ್ಯವಾದ ಬಳಿಕ ತನಿಖೆಗೆ ಕೈಗೊಂಡಿದ್ದಾರೆ.
ಸದ್ಯ ದೆಹಲಿ ಪೊಲೀಸರು (Delhi Police) ಕ್ಯಾಬ್ ಮತ್ತು ಚಾಲಕನನ್ನು ಪತ್ತೆಹಚ್ಚಿದ್ದಾರೆ. ವೀಡಿಯೋದಲ್ಲಿ ಕಾಣುತ್ತಿರುವ ಇಬ್ಬರು ಯುವಕರು ಯುವತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನ ಕೊಲೆ ಪ್ರಕರಣ – 8 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್
ದೆಹಲಿಯ ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಆ್ಯಪ್ (Uber App) ಮೂಲಕ ಕ್ಯಾಬ್ ಬುಕ್ ಮಾಡಲಾಗಿತ್ತು. ಮಾರ್ಗಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೈಹಿಕ ಹಲ್ಲೆಗೆ ಕಾರಣವಾಗಿದೆ ಎನ್ನಲಾಗಿದೆ.