ನವದೆಹಲಿ: ಚಲಿಸುತ್ತಿದ್ದ ಖಾಸಗಿ ಬಸ್ಸಿನೊಳಗೆ (Private Bus) ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಎಸಗಿರುವ ಘಟನೆ ದೆಹಲಿಯ (Delhi) ನಂಗ್ಲೋಯಿಯಲ್ಲಿ (Nangloi) ನಡೆದಿದೆ.
ಬಸ್ಸಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರ ಮೇಲೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಬಸ್ ಡ್ರೈವರ್, ಕಂಡಕ್ಟರ್ ಇಬ್ಬರನ್ನೂ ಬಂಧಿಸಿದ್ದಾರೆ.
ಸೋಮವಾರ ರಾತ್ರಿ 11 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಎಂದಿನಂತೆ ಕೆಲಸ ಮುಗಿಸಿ ಮಹಿಳೆ ಸರಸ್ವತಿ ವಿಹಾರ್ ಬಿ-ಬ್ಲಾಕ್ ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂದು ಸ್ಲೀಪರ್ ಬಸ್ ಪಕ್ಕದಲ್ಲಿ ನಿಂತಿತ್ತು. ಬಸ್ಸಿನ ಬಾಗಿಲ ಬಳಿ ನಿಂತಿದ್ದ ಕಂಡಕ್ಟರ್ ಬಳಿ ಮಹಿಳೆ ಸಮಯ ಕೇಳಲೆಂದು ಧಾವಿಸಿದ ವೇಳೆ ಆಕೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿದೆ. ಇದನ್ನೂ ಓದಿ: ಜಿಲೆಟಿನ್ ಪತ್ತೆ ಕೇಸ್ – 3 ಗಂಟೆ ಎನ್‌ಐಎ ವಿಚಾರಣೆ, ಅಖಾಡಕ್ಕೆ ಇಳಿದ ಕಮಿಷನರ್
ದೆಹಲಿಯ ರಾಣಿಬಾಗ್ ಪ್ರದೇಶದಲ್ಲಿ ಕೃತ್ಯ ಎಸಗಲಾಗಿದ್ದು, ಸುಮಾರು 7 ಕಿ.ಮೀವರೆಗೆ ಬಸ್ ಚಲಿಸುತ್ತಲೇ ಇತ್ತು. ತಡರಾತ್ರಿ 2 ಗಂಟೆಯ ಸುಮಾರಿಗೆ ಮಹಿಳೆಯನ್ನು ಬಸ್ಸಿನಿಂದ ಹೊರದಬ್ಬಿದ್ದಾರೆ. ಇದರಿಂದ ಮಹಿಳೆಗೆ ಗಾಯಗಳಾಗಿವೆ. ಸದ್ಯ ಘಟನೆ ಕುರಿತು ಹೆಚ್ಚಿನ ತನಿಖೆಗಾಗಿ ಕೃತ್ಯಕ್ಕೆ ಬಳಸಿದ ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಾಬ್‌ಗೆ ಗ್ರೀನ್ ಸಿಗ್ನಲ್; ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ವಿರೋಧ – ಉಗ್ರ ಪ್ರತಿಭಟನೆ ಎಚ್ಚರಿಕೆ

