ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯ ಸೋನಿಯಾ ಗಾಂಧಿ ಅವರ ನಿವಾಸದೇದರು ಪ್ರತಿಭಟನೆ ನಡೆಸುವ ಮೂಲಕ ಟಿಕೆಟ್‍ಗೆ ಆಗ್ರಹಿಸಿದ್ದಾರೆ.
ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಈಗಾಗಲೇ ಟಿಕೆಟ್ ಘೋಷಿಸಿದ್ದು, ಕಾಂಗ್ರೆಸ್ ಇನ್ನೂ ಗೊಂದಲದಲ್ಲಿದೆ. ಈ ನಡುವೆ ಕೆಲವು ನಾಯಕರಿಗೆ ಟಿಕೆಟ್ ನಿರಾಕರಿಸಿರಿವ ಸುದ್ದಿ ಹರಡಿದ ಬೆನ್ನೆಲ್ಲೇ ಸೋನಿಯಾ ಗಾಂಧಿ ನಿವಾಸದೆದರು ಬೆಂಬಲಿಗರು ಪ್ರತಿಭಟನೆ ನಡೆಸಿದರು. ಪಟೇಲ್ ನಗರ ಮತ್ತು ಕರವಾಲ್ ನಗರ ವಿಧಾನಸಭಾ ಕ್ಷೇತ್ರಗಳಿಂದ ಬಂದಿದ್ದ ಪ್ರತಿಭಟನಾಕಾರರು ಶೀಘ್ರ ಪಕ್ಷದ ಚುನಾವಣಾ ಅಭ್ಯರ್ಥಿಗಳ ಘೋಷಣೆ ಮಾಡುವಂತೆ ಒತ್ತಾಯಿಸಿದರು. ಇದನ್ನೂ ಓದಿ: ದೆಹಲಿ ಚುನಾವಣೆಗೆ ಘೋಷಣೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ- ಖಾತೆ ತೆರೆಯಲು ‘ಕೈ’ ತಂತ್ರ
Advertisement
Delhi: Congress workers from Patel Nagar and Karawal Nagar constituencies protest outside Congress interim President Sonia Gandhi's residence over ticket distribution. #DelhiElections2020 pic.twitter.com/Bg6Jlomepo
— ANI (@ANI) January 18, 2020
Advertisement
ಕರವಾಲ್ ನಗರದಿಂದ ಅರವಿಂದ್ ಸಿಂಗ್, ಪಟೇಲ್ ನಗರದಿಂದ ಹರ್ಮನ್ ಸಿಂಗ್ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎನ್ನುವ ಸುದ್ದಿ ಕಾರ್ಯಕರ್ತರ ಅಸಮಾಧಾನ ಮತ್ತು ಪ್ರತಿಭಟನೆ ಕಾರಣವಾಗಿತ್ತು. ಪ್ರತಿಭಟನೆ ವೇಳೆ ಕೋಪಗೊಂಡಿದ್ದ ಪ್ರತಿಭಟನಾಕಾರರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ (ಡಿಪಿಸಿಸಿ) ಅಧ್ಯಕ್ಷ ಸುಭಾಷ್ ಚೋಪ್ರಾ ಅವರ ಕಾರಿಗೆ ಅಡ್ಡ ಹಾಕಿದರು. ಆಗ ಚೋಪ್ರಾ ಅವರು, ಇಂದು ಪಕ್ಷವು ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದೆ ಎಂದು ಹೇಳಿದ ಬಳಿಕ ಪ್ರತಿಭಟನಾಕಾರರು ಕಾರಿಗೆ ದಾರಿ ಬಿಟ್ಟರು.
Advertisement
70 ಕ್ಷೇತ್ರಗಳ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಫೆಬ್ರವರಿ 8ರಂದು ನಡೆಯಲಿದ್ದು, ಫೆಬ್ರವರಿ 11 ರಂದು ಮತ ಎಣಿಕೆ ನಡೆಯಲಿದೆ.