ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ (IPL) 2022 ಮತ್ತು 2023ರ ಋತುಗಳಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಸಹಾಯಕ ಕೋಚ್‍ಗಳಾದ ಅಜಿತ್ ಅಗರ್ಕರ್ ಮತ್ತು ಶೇನ್ ವ್ಯಾಟ್ಸನ್ ಅವರನ್ನು ಕೈ ಬಿಡಲಾಗಿದೆ.
2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನದಲ್ಲಿದ್ದರೆ, 2023 ರಲ್ಲಿ 9 ಸ್ಥಾನಕ್ಕೆ ಕುಸಿತ ಕಂಡಿತ್ತು. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 5 ಗೆಲುವುಗಳನ್ನು ದಾಖಲಿಸಿತು. ರಿಷಭ್ ಪಂತ್ ಹೊರಗುಳಿದಿದ್ದರಿಂದ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ತಂಡ ಗೆಲುವಿಗಾಗಿ ಹೋರಾಟ ನಡೆಸಿತ್ತು. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್ ಪ್ಲ್ಯಾನ್ – ಇದರಿಂದ ಯಾರಿಗೆ ನಷ್ಟ?
Advertisement
Advertisement
2022ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ 14 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆದ್ದಿದೆ. ಆದರೆ ಲೀಗ್‍ನಲ್ಲಿ 8 ಪಂದ್ಯಗಳನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್‍ಗಿಂತ (RCB) ಉತ್ತಮ ರನ್ ರೇಟ್ ಹೊಂದಿದ್ದರೂ ಸಹ ಪ್ಲೇಆಫ್‍ನಲ್ಲಿ ಸ್ಥಾನ ಪಡೆಯಲು ಡೆಲ್ಲಿ ವಿಫಲವಾಗಿತ್ತು.
Advertisement
Advertisement
ಡೆಲ್ಲಿ ಕ್ಯಾಪಿಟಲ್ಸ್‌ನ ಇತ್ತೀಚಿನ ಪ್ರಕಟಣೆಯಲ್ಲಿ ರಿಕಿ ಪಾಂಟಿಂಗ್ ಅವರು ಮುಖ್ಯ ಕೋಚ್ ಆಗಿ ತಮ್ಮ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ. ಸೌರವ್ ಗಂಗೂಲಿ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದಾರೆ. ಪಾಂಟಿಂಗ್ ಅವರು ಐಪಿಎಲ್ 2018ರ ಮೊದಲು ಮುಖ್ಯ ತರಬೇತುದಾರರಾಗಿದ್ದಾರೆ. ಐಪಿಎಲ್ 2024ಕ್ಕೆ ಎದುರು ನೋಡುತ್ತಿರುವ ತಂಡ, ರಿಷಬ್ ಪಂತ್ ನಾಯಕತ್ವದ ನಿರೀಕ್ಷೆಯಲ್ಲಿದೆ. ಈ ನಡುವೆ ಅಜಿತ್ ಅಗರ್ಕರ್ ಟೀಮ್ ಇಂಡಿಯಾದ ಮುಂದಿನ ಮುಖ್ಯ ಆಯ್ಕೆದಾರರಾಗಬಹುದು ಎಂಬ ವರದಿ ಪ್ರಕಟವಾಗಿದೆ. ಇದನ್ನೂ ಓದಿ: Asian Games 2023 – ಶಿಖರ್ ಧವನ್‌ಗೆ ಟೀಂ ಇಂಡಿಯಾ ನಾಯಕತ್ವ?
Web Stories