Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಾಂಬ್‌ ದಾಳಿಗೂ ಮುನ್ನ ತಬ್ಲಿಘಿ ಜಮಾತ್‌ ಮಸೀದಿಗೆ ಭೇಟಿ ನೀಡಿದ್ದ ಉಮರ್‌ ನಬಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಬಾಂಬ್‌ ದಾಳಿಗೂ ಮುನ್ನ ತಬ್ಲಿಘಿ ಜಮಾತ್‌ ಮಸೀದಿಗೆ ಭೇಟಿ ನೀಡಿದ್ದ ಉಮರ್‌ ನಬಿ

Latest

ಬಾಂಬ್‌ ದಾಳಿಗೂ ಮುನ್ನ ತಬ್ಲಿಘಿ ಜಮಾತ್‌ ಮಸೀದಿಗೆ ಭೇಟಿ ನೀಡಿದ್ದ ಉಮರ್‌ ನಬಿ

Public TV
Last updated: November 13, 2025 12:05 pm
Public TV
Share
2 Min Read
Delhi blast Case Dr. Umar Nabi visited Tablighi Jamaat mosque then went to Red Fort
SHARE

– ತಬ್ಲಿಘಿ ಸಂಘಟನೆಯನ್ನು ಉಗ್ರ ಚಟುವಟಿಕೆಯ ಹೆಬ್ಬಾಗಿಲು ಎಂದಿದ್ದ ಸೌದಿ
– ಈ ಸಂಘಟನೆಯಿಂದ ದೂರ ಇರುವಂತೆ ಜನರಿಗೆ ಕರೆ

ನವದೆಹಲಿ: ಬಾಂಬರ್‌ ಉಮರ್‌ ನಬಿ (Dr. Umar Nabi) ಕೆಂಪುಕೋಟೆಯ ಬಳಿ ಕಾರು ಬಾಂಬ್‌ (Red Fort Car bomb Blast) ಸ್ಫೋಟಿಸುವ ಮೊದಲು ದೆಹಲಿಯಲ್ಲಿರುವ ತಬ್ಲಿಘಿ ಜಮಾತ್‌ (Tablighi Jamaat Mosque) ಸಂಘಟನೆ ನಡೆಸುವ ಮಸೀದಿಗೆ ಭೇಟಿ ನೀಡಿದ್ದ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಡಾ. ಉಮರ್‌ ಕಾರು ಬಾಂಬ್‌ ಸ್ಫೋಟ ನಡೆದ ನವೆಂಬರ್‌ 10 ರಂದು ಮಧ್ಯಾಹ್ನ 2:30ರ ಸುಮಾರಿಗೆ ಫೈಜ್ ಇಲಾಹಿ ಮಸೀದಿಗೆ (Faiz Elahi Masjid) ಭೇಟಿ ನೀಡಿ ಅಲ್ಲಿ ಸುಮಾರು 10-15 ನಿಮಿಷಗಳ ಕಾಲ ಕಳೆದಿದ್ದ. ನಂತರ ಸುನೇಹ್ರಿ ಮಸೀದಿ ಬಳಿಯ ಕೆಂಪು ಕೋಟೆ ಪಾರ್ಕಿಂಗ್‌ಗೆ ತೆರಳಿ ಕಾರು ಪಾರ್ಕ್‌ ಮಾಡಿದ್ದ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಉಮರ್‌ ಮಸೀದಿಯೊಳಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ದೃಶ್ಯಗಳು ಸೆರೆಯಾಗಿವೆ. ಫೈಜ್ ಇಲಾಹಿ ಮಸೀದಿ ರಾಮ್‌ಲೀಲಾ ಮೈದಾನದ ಮೂಲೆಯಲ್ಲಿ ತುರ್ಕಮನ್ ಗೇಟ್ ಎದುರು ಇದೆ. ತಬ್ಲಿಘಿ ಜಮಾತ್ ಸಂಘಟನೆ ಫೈಜ್ ಇಲಾಹಿ ಮಸೀದಿಯನ್ನು ನಿರ್ವಹಣೆ ಮಾಡುತ್ತದೆ.

 

ತಬ್ಲಿಘಿಗಳು ಯಾರು?
ಬ್ರಿಟಿಷರ ಅವಧಿಯಲ್ಲಿ 1926 ರಲ್ಲಿ ಭಾರತದಲ್ಲಿ ಹುಟ್ಟಿಕೊಂಡ ತಬ್ಲಿಘಿ ಜಮಾತ್ ಸುನ್ನಿ ಇಸ್ಲಾಮಿಕ್ ಮಿಷನರಿ ಸಂಘಟನೆಯಾಗಿದೆ. ಮುಸ್ಲಿಂ ಸಂಪ್ರದಾಯ, ಆಚರಣೆ, ಉಡುಪುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂದು ಪ್ರತಿಪಾದಿಸುತ್ತದೆ. ಜಗತ್ತಿನಾದ್ಯಂತ 35 ರಿಂದ 40 ಕೋಟಿ ಅನುಯಾಯಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ರಾಜಕೀಯ ಚಟುವಟಿಕೆಯಿಂದ ದೂರ ಇದ್ದು ಧರ್ಮ ಪ್ರಚಾರ ಮಾತ್ರ ನಮ್ಮ ಕೆಲಸ ಎಂದು ಸಂಘಟನೆ ಹೇಳಿಕೊಳ್ಳುತ್ತದೆ.‌

ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಭಾರತದಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಸಾಮೂಹಿಕ ಸಭೆಯ ಆಯೋಜಿಸಿದ್ದಕ್ಕೆ ಈ ಸಂಘಟನೆಯ ವಿರುದ್ಧ ಮೊದಲ ಬಾರಿಗೆ ದೇಶದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಇದನ್ನೂ ಓದಿ:  ಉಗ್ರ ಚಟುವಟಿಕೆಗಳಿಗೆ ಹೆಬ್ಬಾಗಿಲು – ತಬ್ಲಿಘಿ ಸಂಘಟನೆಯನ್ನು ನಿಷೇಧಿಸಿದ ಸೌದಿ ಸರ್ಕಾರ

ತಬ್ಲಿಘಿಗಳು ನೇರವಾಗಿ ಉಗ್ರ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಉದಾಹರಣೆಯಿಲ್ಲ. ಆದರೆ ಈ ಸಂಘಟನೆ ನೀಡುವ ವಿಪರೀತ ಧರ್ಮ ಬೋಧನೆಯಿಂದ ಇದರ ಅನುಯಾಯಿಗಳು ಮತೀಯವಾದಿ ಮುಸ್ಲಿಮ್‌ ಸಂಘಟನೆಗಳಿಗೆ ಸೇರುತ್ತಾರೆ ಎನ್ನುವ ಆರೋಪವಿದೆ.

His Excellency also directed that the sermon include the following topics:

1- Declaration of the misguidance, deviation and danger of this group, and that it is one of the gates of terrorism, even if they claim otherwise.
2- Mention their most prominent mistakes.

— Ministry of Islamic Affairs 🇸🇦 (@Saudi_MoiaEN) December 6, 2021

ಸೌದಿಯಿಂದ ನಿಷೇಧ:
ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ 2021 ರಲ್ಲಿ ನಿಷೇಧಿಸಿತ್ತು ಈ ಸಂಘಟನೆ ಭಯೋತ್ಪಾದನೆ ಚಟುವಟಿಕೆಗಳಿಗೆ ಹೆಬ್ಬಾಗಿಲು ಎಂದಿರುವ ಸರ್ಕಾರ ಈ ಸಂಘಟನೆಯಿಂದ ದೂರ ಇರುವಂತೆ ಪ್ರಜೆಗಳಿಗೆ ಎಚ್ಚರಿಕೆ ನೀಡಿತ್ತು. ಮುಸ್ಲಿಮ್‌ ಸಮಾಜಕ್ಕೆ ಈ ಸಂಘಟನೆ ತಪ್ಪು ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿತ್ತು.

TAGGED:delhi blastFaiz Elahi MasjidRed FortTablighi JamaatUmar Nabiಉಮರ್‌ ನಬಿತಬ್ಲಿಘಿ ಜಮಾತ್ಸೌದಿ ಅರೇಬಿಯಾ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Donald Trump Angry
Latest

ಮತ್ತೆ ಪಾಕ್‌ನಲ್ಲಿ ಮಾತುಕತೆ – ಈ ಬಾರಿ ವಿಫಲವಾದರೆ ಇರಾನ್‌ ನಾಶ: ಟ್ರಂಪ್‌ ಎಚ್ಚರಿಕೆ

Public TV
By Public TV
2 hours ago
mojtaba khamenei and trump
Latest

ಶಾಂತಿ ಮಾತುಕತೆಗೆ ನಾವು ಬರಲ್ಲ: ಇರಾನ್‌ ನಿರಾಕರಿಸಿದ್ದು ಯಾಕೆ?

Public TV
By Public TV
2 hours ago
PBKS vs LSG IPL 2026 1
Cricket

ಪ್ರಿಯಾಂಶ್, ಕೊನೊಲಿ ಅಬ್ಬರದ ಆಟಕ್ಕೆ ಲಕ್ನೋ ಧೂಳಿಪಟ – ಪಂಜಾಬ್‌ಗೆ 54 ರನ್‌ಗಳ ಭರ್ಜರಿ ಜಯ

Public TV
By Public TV
2 hours ago
Doctor Ramesh who was supposed to marry his wifes sister tomorrow murdered Sirsi KHB Colony
Crime

ನಾಳೆ ಪತ್ನಿಯ ಸಹೋದರಿಯನ್ನು ಮದುವೆಯಾಗಬೇಕಿದ್ದ ವೈದ್ಯನ ಹತ್ಯೆ

Public TV
By Public TV
2 hours ago
Women hitting young men with chappals Hubballi
Dharwad

ತುಮ್ಹಾರ ಫೋನ್ ನಂಬರ್ ದೇದೋ ಎಂದ ಯುವಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

Public TV
By Public TV
3 hours ago
Cooper Connolly and Priyansh Arya of Punjab Kings scored 32 runs Aiden Markram single over
Cricket

ಒಂದೇ ಓವರ್‌ನಲ್ಲಿ 32 ರನ್‌ – ಕೊನೊಲಿ, ಪ್ರಿಯಾಂಶ್‌ ಆಟಕ್ಕೆ ಮಾರ್ಕ್ರಾಮ್ ಪಂಚರ್‌

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?