– ವಿವಿಧ ನಾಯಕರಿಂದ ಕೇಜ್ರಿವಾಲ್‍ಗೆ ಪಕ್ಷಾತೀತವಾಗಿ ಶುಭಾಶಯ
– ಆಮ್ ಆದ್ಮಿ ಸುನಾಮಿಗೆ ಬಿಜೆಪಿ, ಕಾಂಗ್ರೆಸ್ ಧೂಳೀಪಟ
– ಫೆ.14ಕ್ಕೆ ಕಾಮನ್‍ಮ್ಯಾನ್ ಕೇಜ್ರಿವಾಲ್ ಪ್ರಮಾಣವಚನ
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ ಮತ್ತೆ ಭರ್ಜರಿಯಾಗಿ ಗೆದ್ದು ಬೀಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು ಎಎಪಿ ಗುಡಿಸಿ ಹಾಕಿದೆ. ಕಾಮನ್‍ಮ್ಯಾನ್ ಎಂದೇ ಕರೆಸಿಕೊಂಡ ಅರವಿಂದ್ ಕೇಜ್ರಿವಾಲ್ ಎದುರು ಚಾಣಕ್ಯ ಜೋಡಿಯೆಂದೇ ಹೆಸರಾದ ಪ್ರಧಾನಿ ನರೇಂದ್ರ ಮೋದಿ-ಅಮಿತ್ ಶಾ ಕೂಟ ಹೇಳ ಹೆಸರಿಲ್ಲದಂತೆ ಹೋಗಿದೆ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ, ಜಾರ್ಖಂಡ್, ಹರಿಯಾಣ ಬಳಿಕ 6ನೇ ರಾಜ್ಯ ದೆಹಲಿಯಲಿಯಲ್ಲಿಯೂ ಬಿಜೆಪಿ ಹೀನಾಯ ಸೋಲು ಕಂಡಿದೆ. ಪ್ರಧಾನಿ ಮೋದಿ, ಅಮಿತ್ ಶಾ ಭರ್ಜರಿ ಪ್ರಚಾರ ಮಾಡಿದ್ರೂ ಬಿಜೆಪಿ ಒಂದಂಕಿಗೆ ಸೀಮಿತವಾಗಿದೆ. ಎಎಪಿ ಮುಂದೆ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಅಳಸಿ ಹೋಗಿದೆ. ಬೆಳಗ್ಗೆ ಮತ ಎಣಿಕೆ ಶುರುವಾದ ಕ್ಷಣದಿಂದಲೂ ಆಪ್ ಭಾರೀ ಮುನ್ನಡೆ ಕಾಯ್ದುಕೊಳ್ತು. ಕೊನೆಯವರೆಗೂ ಅದನ್ನು ಕಾಪಾಡಿಕೊಂಡಿತು. ಯಾವುದೇ ಹಂತದಲ್ಲಿ ಮೋದಿಯನ್ನು ನಂಬಿಕೊಂಡು ಎಲೆಕ್ಷನ್‍ಗೆ ಹೋದ ಬಿಜೆಪಿಯಾಗ್ಲಿ, ರಾಹುಲ್ ನಂಬಿಕೊಂಡಿದ್ದ ಕಾಂಗ್ರೆಸ್ ಆಗಲಿ ಸರಿಸಾಟಿ ಆಗಲೇ ಇಲ್ಲ.
Advertisement
Advertisement
ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿದ್ದು, ಕೇಜ್ರಿವಾಲ್ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ಈ ಮೂಲಕ ಕೇಜ್ರಿವಾಲ್ ಶೀಲಾ ದೀಕ್ಷಿತ್ ಮಾಡಿದ್ದ ಸಾಧನೆಯನ್ನು ಸರಿಗಟ್ಟಿದ್ದಾರೆ. ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದ್ರೆ, ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಗಳು ಬಿಕೋ ಎನ್ನುತ್ತಿದ್ದವು. ವಿಶೇಷ ಅಂದ್ರೆ, ಎಲ್ಲೂ ಪಟಾಕಿ ಸದ್ದು ಕೇಳಿಬರಲಿಲ್ಲ. ನೀಲಿ ಮತ್ತು ಶ್ವೇತವರ್ಣದ ಬಲೂನ್ ಕಂಡುಬಂದವು.
Advertisement
ದೆಹಲಿ ಫಲಿತಾಂಶ:
ಒಟ್ಟು 70 ವಿಧಾನಸಭಾ ಕ್ಷೇತ್ರಗಳ
> ಎಎಪಿ: 62 (-5 ), 2015ರಲ್ಲಿ 67 ಸ್ಥಾನ
> ಬಿಜೆಪಿ: 8 (+5 ), 2015ರಲ್ಲಿ 03 ಸ್ಥಾನ
> ಕಾಂಗ್ರೆಸ್ – 00 (00)
ಕೇವಲ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಉಳಿದಂತೆ 63 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.
Advertisement
ಗೆದ್ದ ಪ್ರಮುಖರು?
> ಅರವಿಂದ್ ಕೇಜ್ರಿವಾಲ್- ಎಎಪಿ – ನವದೆಹಲಿ (ಸಿಎಂ) (21,697 ಮತಗಳ ಅಂತರದ ಗೆಲುವು)
> ಮನೀಶ್ ಸಿಸೋಡಿಯಾ- ಎಎಪಿ – ಪತ್‍ಪರ್‍ಗಂಜ್ (ಡಿಸಿಎಂ) (3,207 ಮತಗಳ ಅಂತರದ ಗೆಲುವು)
> ವಿಜೇಂದರ್ ಗುಪ್ತಾ- ಬಿಜೆಪಿ – ರೋಹಿಣಿ (ವಿಪಕ್ಷ ನಾಯಕ) (12,648 ಮತಗಳ ಅಂತರದ ಗೆಲುವು
> ಅತಿಶಿ- ಎಎಪಿ – ಕಲ್ಕಾಜಿ (10,393 ಮತಗಳ ಅಂತರದ ಗೆಲುವು)
> ಅಮಾನತುಲ್ಹಾ ಖಾನ್- ಎಎಪಿ – ಓಖ್ಲಾ – (88,497 ಮತಗಳ ಅಂತರದ ದೊಡ್ಡ ಗೆಲುವು) ಇಲ್ಲಿಯೇ ಶಾಹೀನ್‍ಬಾಗ್ ಇರುವುದು
ಸೋತ ಪ್ರಮುಖರು?
> ತೇಜಿಂದರ್ ಪಾಲ್ ಬಗ್ಗಾ- ಬಿಜೆಪಿ – ಹರಿನಗರ್ (21,131 ಮತಗಳ ಅಂತರದ ಸೋಲು)
> ಅಲ್ಕಾ ಲಂಬಾ- ಕಾಂಗ್ರೆಸ್ – ಚಾಂದನಿ ಚೌಕ್ (47,010 ಮತಗಳ ಅಂತರದ ಸೋಲು, ಲಂಬಾ ಪಡೆದ ಮತ 3881)
> ಕಪಿಲ್ ಮಿಶ್ರಾ- ಬಿಜೆಪಿ – ಮಾಡೆಲ್ ಟೌನ್ (11,133 ಮತಗಳ ಅಂತರದ ಸೋಲು)
ಗಣ್ಯರಿಂದ ಕೇಜ್ರಿವಾಲ್‍ಗೆ ಶುಭಾಶಯ:
ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಜೆಸಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎನ್‍ಸಿಪಿ ನಾಯಕ ಶರದ್ ಪವಾರ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಅನೇಕ ನಾಯಕರುಪಕ್ಷಾತೀತವಾಗಿ ಶುಭಕೋರಿದ್ದಾರೆ. ಶುಭಕೋರಿದ ಎಲ್ಲ ನಾಯಕರಿಗೂ ಕೇಜ್ರಿವಾಲ್ ಧನ್ಯವಾದ ತಿಳಿಸಿದ್ದಾರೆ.
Thank u so much sir. I look forward to working closely wid Centre to make our capital city into a truly world class city. https://t.co/IACEVA091c
— Arvind Kejriwal (@ArvindKejriwal) February 11, 2020