ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಯಲ್ಲಿ (Election) ಸೋಲಾದ ಬಳಿಕ ಭಾರತೀಯ ಜನತಾ ಪಕ್ಷದ (BJP) ದೆಹಲಿಯ ಅಧ್ಯಕ್ಷ ಆದೇಶ್ ಗುಪ್ತಾ (Adesh Gupta) ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದಾರೆ.
ಆದೇಶ್ ಗುಪ್ತಾ ಅವರ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಅಂಗೀಕರಿಸಿದ್ದಾರೆ. ವೀರೇಂದ್ರ ಸಚ್‌ದೇವ ಅವರನ್ನು ಈಗ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮುಂದಿನ ದೆಹಲಿ ಬಿಜೆಪಿ ಅಧ್ಯಕ್ಷರ ನೇಮಕವಾಗುವವರೆಗೆ ಸಚ್‌ದೇವ ಹಂಗಾಮಿ ಅಧ್ಯಕ್ಷರಾಗಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂಸಿಡಿ ಚುನಾವಣೆಯ ಸೋಲಿನ ನೈತಿಕ ಹೊಣೆಯನ್ನು ನಾನು ಹೊತ್ತುಕೊಂಡಿದ್ದೇನೆ. ನಾವು ಎಂಸಿಡಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುತ್ತೇವೆಂದು ನಿರೀಕ್ಷಿಸಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ನಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲಕ್ಕೆ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣವಚನ ಸ್ವೀಕಾರ
ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಜಯಗಳಿಸಿದೆ. 250 ವಾರ್ಡ್ಗಳ ಎಂಸಿಡಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ 134 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 104, ಕಾಂಗ್ರೆಸ್ 9 ಹಾಗೂ ಇತರ 3 ಸ್ಥಾನಗಳನ್ನು ಗಳಿಸಿದೆ. ಇದನ್ನೂ ಓದಿ: ಡಿಕ್ಷನರಿಯಲ್ಲಿ ಕಾಂಗ್ರೆಸ್‍ನ ಅರ್ಥವನ್ನು ಹೊಡೆದಾಟ, ಬಡಿದಾಟವೆಂದು ಬರೆಯಬೇಕು: ಪ್ರಹ್ಲಾದ್ ಜೋಶಿ