ಬಿಗ್ ಬಾಸ್ ಮನೆಯ (Bigg Boss House) ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ. ರೂಪೇಶ್ ಶೆಟ್ಟಿ (Roopesh Shetty) ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ (Sanya Iyer) ಬಗ್ಗೆ ಅಚ್ಚರಿಯ ವಿಚಾರವೊಂದನ್ನ ದೀಪಿಕಾ ದಾಸ್ ಹಂಚಿಕೊಂಡಿದ್ದಾರೆ.
Advertisement
ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ನಡುವೆ ದೊಡ್ಮನೆಯಲ್ಲಿ ಸ್ಪೆಷಲ್ ಬಾಂಡ್‌ವೊಂದು ಕ್ರಿಯೆಟ್ ಆಗಿದೆ. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಇವರಿಬ್ಬರ ಜೋಡಿ ದೊಡ್ಮನೆಯಲ್ಲಿ ಮೋಡಿ ಮಾಡಿತ್ತು. ಇನ್ನೂ ಸಾನ್ಯ ಎಲಿಮಿನೇಷನ್ (Elimination) ನಂತರ ಬಿಕ್ಕಿ ಬಿಕ್ಕಿ ಅತ್ತಿದ್ದ ರೂಪೇಶ್ ಶೆಟ್ಟಿ ಅವರ ಅಂದಿನ ನಡೆ ಮನೆಯಲ್ಲಿ ಹೇಗಿತ್ತು, ಬಳಿಕ ಹೇಗೆ ಬದಲಾದರು ಎಂಬುದನ್ನ ದೀಪಿಕಾ ದಾಸ್ (Deepika Das) ರಿವೀಲ್ ಮಾಡಿದ್ದಾರೆ.
Advertisement
Advertisement
ಇಬ್ಬರೂ ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಫ್ರೆಂಡ್ಸ್ ಅಂತಾನೇ ಹೇಳಿಕೊಂಡಿದ್ದರು. ಆಗಾಗ ಮುನಿಸು, ಮನಸ್ತಾಪ ಆಗುತ್ತಿತ್ತು. ಅದನ್ನ ಅಲ್ಲಿಯೇ ಸರಿಮಾಡಿಕೊಳ್ಳುತ್ತಿದ್ದರು. ಸಾನ್ಯ ಎಲಿಮಿನೇಷನ್ ನಂತರ ರೂಪೇಶ್‌ಗೆ ಸಾಕಷ್ಟು ವಿಚಾರ ಅರಿವಾಗಿದೆ. ಸಾನ್ಯ ಇದ್ದಾಗ ನಾನು ಟೈಮ್ ಕೊಡಲಿಲ್ಲ ಎಂದು ರೂಪೇಶ್ ಬೇಸರಮಾಡಿಕೊಂಡಿದ್ದರು. ಕಡೆಗೆ ಒಂದು ವಾರದ ನಂತರ ಹೊಸ ರೂಪೇಶ್ ಶೆಟ್ಟಿಯನ್ನೇ ನಾವು ನೋಡಿದ್ದೀವಿ ಎಂದು ದೀಪಿಕಾ ದಾಸ್ ಮಾತನಾಡಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಟ್ ಆದಮೇಲೆ ಅವಳ ಬೆಲೆ ರೂಪೇಶ್ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್
Advertisement
ಇನ್ನೂ ದೀಪಿಕಾ ದಾಸ್ ಅವರು, ಸೀಸನ್ 9ರ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ನಂತರ ಇದೀಗ ಸಿನಿಮಾಗಳತ್ತ ನಟಿ ಮುಖ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k