ಸೌತ್- ಬಾಲಿವುಡ್ (Bollywood) ನಟಿಮಣಿಯರ ಮುಂದೆ ಯಾವ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ (Deepika Das) ಮಿಂಚಿದ್ದಾರೆ. ಮಾಡ್ರನ್ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ನಟಿ ದೀಪಿಕಾ ದಾಸ್, ಹಸಿರು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಬಳುಕುವ ಬಳ್ಳಿಯ ಹಾಗೆ ಕ್ಯಾಮೆರಾಗೆ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಲುಕ್ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಬಾಲಿವುಡ್ ನಟಿಮಣಿಯರಿಗೆ ಪೈಪೋಟಿ ನೀಡುವಂತೆ ಹೊಸ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಪುನರ್ ವಿವಾಹ’ ನಟ ಅಥರ್ವ್ ಹೊಸ ಚಿತ್ರಕ್ಕೆ ಸುದೀಪ್ ಸಾಥ್
ಸ್ಯಾಂಡಲ್‌ವುಡ್ (Sandalwood) ಸಿನಿಮಾಗಳಲ್ಲಿ ಮಿಂಚಲು ನಟಿ ಸಕಲ ತಯಾರಿಯನ್ನ ಮಾಡಿಕೊಂಡಿದ್ದು, ‘ಪಾಯಲ್’ (Payal) ಎಂಬ ಸಿನಿಮಾದ ಮೂಲಕ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ಚಿತ್ರದ ಕಡೆಯ ಹಂತದ ಕೆಲಸ ನಡೆಯುತ್ತಿದೆ.
‘ಕೃಷ್ಣ ರುಕ್ಮಿಣಿ’ ಸೀರಿಯಲ್‌ನಲ್ಲಿ ಡಾರ್ಲಿಂಗ್ ಕೃಷ್ಣ ಸಹೋದರಿಯಾಗಿ ದೀಪಿಕಾ ನಟಿಸಿದ್ದರು. ‘ನಾಗಿಣಿ’ ಸೀರಿಯಲ್ ನಟಿಗೆ ಬಿಗ್ ಬ್ರೇಕ್ ಕೊಡ್ತು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ದೀಪಿಕಾ ಗಟ್ಟಿ ಸ್ಪರ್ಧಿಯಾಗಿ ಹೈಲೈಟ್ ಆಗಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]