ಬೆಂಗಳೂರು: ಜನಸಾಮಾನ್ಯರಿಗೆ ದಿನಕ್ಕೊಂದು ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ದಿನಸಿ ಪದಾರ್ಥ, ತರಕಾರಿ ಬೆಲೆ ಏರಿಕೆ ಆಯಿತು. ಇದೀಗ ಪಿಜಿ (PG) ಹಾಗೂ ಹಾಸ್ಟೆಲ್ (Hostel) ಬಾಡಿಗೆ (Rent) ಬೆಲೆ ಏರಿಕೆಯಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಬ್ಯಾಚುಲರ್‌ಗಳ ಜೇಬಿಗೆ ಕನ್ನ ಹಾಕಲಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಕಾದಿದೆ. ಇನ್ನುಮುಂದೆ ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸಿಸುವವರು ಸಹ ಜಿಎಸ್‌ಟಿ (GST) ಕಟ್ಟಬೇಕು. ಇದು ವಿದ್ಯಾರ್ಥಿಗಳು, ಬ್ಯಾಚುಲರ್‌ಗಳಿಗೆ ಹಾಗೂ ಒಬ್ಬಂಟಿ ಉದ್ಯೋಗಿಗಳಿಗೆ ಹೊರೆಯಾಗಲಿದೆ. ದಿನದ ಬಾಡಿಗೆ 1,000 ರೂ.ಗಿಂತ ಕಡಿಮೆಯಿದ್ದರೆ 12% ಜಿಎಸ್‌ಟಿ ಹಾಗೂ ಸಾವಿರಕ್ಕಿಂತ ಹೆಚ್ಚಿದ್ದರೆ 18% ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ಬೆಂಗಳೂರಿನ (Bengaluru) ಜಿಎಸ್‌ಟಿ ಅಡ್ವಾನ್ಸ್ ರೂಲಿಂಗ್ ಪೀಠ ಈ ಬಗ್ಗೆ ಆದೇಶ ನೀಡಿದೆ. ಇದನ್ನೂ ಓದಿ: ಮೈಸೂರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ
Advertisement
Advertisement
ಇನ್ನೂ ಈ ಜಿಎಸ್‌ಟಿ ವಿಧಿಸುವ ನಿರ್ಧಾರದಿಂದಾಗಿ, ಬೆಂಗಳೂರಲ್ಲಿ ಪಿಜಿಗಳ ದರ ಏರಿಕೆ ಅನಿವಾರ್ಯವೆಂದು ಬೆಂಗಳೂರು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೇಳಿದೆ. ಅಲ್ಲದೇ ಜಿಎಸ್‌ಟಿಯನ್ನು ವಿದ್ಯಾರ್ಥಿಗಳಿಂದ ಪಡೆಯಲಾಗುವುದು ಎಂದು ಹೇಳಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಬ್ಯಾಚುಲರ್‌ಗಳಿಗೆ ಹಾಗೂ ಒಬ್ಬಂಟಿ ಉದ್ಯೋಗಿಗಳಿಗೆ ಸಾಕಷ್ಟು ಹೊಡೆತ ಬೀಳಲಿದೆ. ಈಗಾಗಲೇ ಬೆಂಗಳೂರಲ್ಲಿ ಪಿಜಿ ಹಾಗೂ ಹಾಸ್ಟೆಲ್‌ಗಳ ಬಾಡಿಗೆ ಸಾಕಷ್ಟು ಹೆಚ್ಚಿದೆ. ಈ ಜಿಎಸ್‌ಟಿ ನಿರ್ಧಾರ ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಬೀಳಲಿದೆ. ಇದನ್ನೂ ಓದಿ: ಚಿಕ್ಕಮಗಳೂರು ದೇವೀರಮ್ಮ ದೇವಾಲಯಕ್ಕೆ ಸ್ಕರ್ಟ್, ಮಿಡಿ, ಪ್ಯಾಂಟ್ ಹಾಕ್ಕೊಂಡು ಬರುವಂತಿಲ್ಲ
Advertisement
Web Stories