ಬೆಂಗಳೂರು: ಲ್ಯಾಟರಲ್ ಎಂಟ್ರಿ (DCET) ಮೂಲಕ ಎಂಜಿನಿಯರಿಂಗ್ 2ನೇ ವರ್ಷಕ್ಕೆ ಪ್ರವೇಶ ಪಡೆಯಲು ಬಯಸುವ ವೃತ್ತಿಪರ ಡಿಪ್ಲೊಮಾ ಪದವೀಧರರಿಗೆ ಕೆಇಎ ಮಹತ್ವದ ಮಾಹಿತಿ ನೀಡಿದೆ. ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಆಗಸ್ಟ್ 13ರಂದು ಬೆಂಗಳೂರಿನ ಕೆಇಎ (KEA) ಕಚೇರಿಯಲ್ಲಿ ನಡೆಯಲಿದೆ.
ಇದುವರೆಗೂ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದ ಅಭ್ಯರ್ಥಿಗಳು ಮಾತ್ರ ಆ.13ರಂದು ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಇದರ ಜೊತೆಗೆ ಯಾದಗಿರಿಯ ವೀರಪ್ಪ ನಿಸ್ಟಿ ಎಂಜಿನಿಯರಿಂಗ್ ಕಾಲೇಜಿನ ಸೀಟ್ ಮ್ಯಾಟ್ರಿಕ್ಸ್ ಕೂಡ ಲಭ್ಯವಾಗಿದೆ. ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವ ವೃತ್ತಿಪರ ಅಭ್ಯರ್ಥಿಗಳೂ ದಾಖಲೆ ಪರಿಶೀಲನೆಗೆ ಹಾಜರಾಗಬಹುದು ಎಂದು ಕೆಇಎ ತಿಳಿಸಿದೆ.ಇದನ್ನೂ ಓದಿ: ತುಂಬಿದ ಕೃಷ್ಣೆಯ ಒಡಲು – ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ
ದಾಖಲೆ ಪರಿಶೀಲನೆಗೆ ಯಾವೆಲ್ಲ ದಾಖಲೆಗಳನ್ನು ತರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಸೂಚಿಸಲಾಗಿದೆ.ಇದನ್ನೂ ಓದಿ: ಭುವನೇಶ್ವರಿ ಗುಂಪಿನ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ – ಮೊದಲ ದಿನದ ಕಾರ್ಯಾಚರಣೆ ಯಶಸ್ವಿ

