ಮುಂಬೈ: ಐಪಿಎಲ್ 2022ರ ಆವೃತ್ತಿಗೆ ಈಗಾಗಲೇ ಕೋವಿಡ್-19ನ ಕರಿನೆರಳು ಆವರಿಸಿದ್ದು, ಕೊರೊನಾ ಭೀತಿಯಿಂದಾಗಿ ಪುಣೆಯಲ್ಲಿ ಬುಧವಾರ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಮೂಲವು ತಿಳಿಸಿದೆ.
ದೆಹಲಿ ತಂಡದ ಆಟಗಾರ, ಸಿಬ್ಬಂದಿ ಸೇರಿದಂತೆ ಈಗಾಗಲೇ 5 ಮಂದಿಗೆ ಕೋವಿಡ್ ದೃಢಪಟ್ಟಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಮೂಲವು ತಿಳಿಸಿದೆ.
Advertisement
Advertisement
ಮೊನ್ನೆ ದೆಹಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರಿಗೆ ಕೋವಿಡ್ ಧೃಡವಾಗಿತ್ತು. ಈಗ ದೆಹಲಿ ಕ್ಯಾಪಿಟಲ್ಸ್‍ನ ಆಲ್‍ರೌಂಡರ್ ಮಿಚೆಲ್ ಮಾರ್ಷ್‍ಗೂ ಕೂಡಾ ಕೋವಿಡ್ ದೃಢವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ದೆಹಲಿ ತಂಡವು ಪ್ರಸ್ತುತ ಮುಂಬೈನಲ್ಲಿ ಕ್ವಾರಂಟೈನ್‍ನಲ್ಲಿದೆ. ಮಿಚೆಲ್ ಮಾರ್ಷ್ ಅವರು ಇತ್ತೀಚಿಗಷ್ಟೇ ಗಾಯದಿಂದ ಚೇತರಿಸಿಕೊಂಡು ಐಪಿಎಲ್ 2022ಕ್ಕೆ ಪಾದಾರ್ಪಣೆ ಮಾಡಿದ್ದರು. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರೊಂದಿಗಿನ ನಿಕಟ ಸಂಪರ್ಕದಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದ ಕಾರಣ ಅವರಿಗೆ ಕೋವಿಡ್ ಸೋಂಕು ಹರಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಯಾರಲ್ಲಾದರೂ ಕೋವಿಡ್ ಸೋಂಕು ಪತ್ತೆಯಾಗದೆ ಇದ್ದು, ಅವರು ಮುಚ್ಚಿದ ವಾತಾವರಣದಲ್ಲಿ ಪ್ರಯಾಣ ಮಾಡುವ ವೇಳೆ ಅದು ಇನ್ನೊಬ್ಬರಿಗೂ ಹರಡಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಬಿಸಿಸಿಐ ಈ ಕ್ರಮಕೈಗೊಂಡಿದೆ.
ಈಗಾಗಲೇ ಸೋಂಕು ದೃಢಪಟ್ಟಿರುವ ಐವರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ. ಅವರಿಗೆಲ್ಲಾ ಎರಡು ಬಾರಿ ಕೋವಿಡ್ ನೆಗಟಿವ್ ವರದಿ ಬಂದ ಮೇಲೆ ತಂಡದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಬಿಸಿಸಿಐ ಸೂಚಿಸಿದೆ.