ತಿರುವನಂತಪುರಂ: ತಾಯಿ ತನ್ನ 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದಲ್ಲಿ ನಡೆದಿದೆ.
ಈ ಘಟನೆ ಇಡುಕ್ಕಿ (Idukki) ಜಿಲ್ಲೆಯ ಉಪ್ಪುತರ ಸಮೀಪ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಲಿಜಾ ಹಾಗೂ ಬೆನ್ ಟಾಮ್ ಎಂದು ಗುರುತಿಸಲಾಗಿದೆ.
Advertisement
ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ..?: ಎರಡು ದಿನಗಳ ಹಿಂದೆಯಷ್ಟೇ ಎದೆ ಹಾಲು ಕುಡಿಯುತ್ತಿದ್ದ ಮಗು ಉಸಿರುಗಟ್ಟಿ ಸಾವನ್ನಪ್ಪಿದ್ದು, ಇದರಿಂದ ತಾಯಿ ತೀವ್ರವಾಗಿ ನೊಂದಿದ್ದರು. ಇದೇ ಬೇಜಾರಲ್ಲಿದ್ದ ತಾಯಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ತನ್ನ 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
Advertisement
Advertisement
ಮನೆಯಲ್ಲಿ ಯಾರೂ ಇಲ್ಲದಿರುವಾಗಲೇ ಲಿಜಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ಬೆಳಗ್ಗೆ ಮನೆಯವರೆಲ್ಲರೂ ಚರ್ಚ್ಗೆ ತೆರಳಿದ ಬಳಿಕ ಲಿಜಾ ಬಾವಿಗೆ ಹಾರಿದ್ದಾರೆ. ಇತ್ತ ಪ್ರಾರ್ಥನೆ ಮುಗಿಸಿ ಬರುತ್ತಿದ್ದಂತೆಯೇ ಮನೆಯಲ್ಲಿ ಲಿಜಾ ಹಾಗೂ ಆಕೆಯ ಮಗ ಇಲ್ಲದಿರುವುದನ್ನು ಗಮನಿಸಿದ ಕುಟುಂಬಸ್ಥರಿಗೆ ಶಾಕ್ ಆಗಿದೆ. ಇದನ್ನೂ ಓದಿ: 20 ವರ್ಷದ ಯುವಕನನ್ನು 100ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಂದು ಪೊದೆಗೆ ಎಸೆದ!
Advertisement
ಕೂಡಲೇ ಎಲ್ಲರೂ ಎಲ್ಲಾ ಕಡೆ ಹುಟುಕಾಟ ನಡೆಸಿದರು. ಈ ವೇಳೆ ಲಿಜಾ ಹಾಗೂ ಆಕೆಯ ಮಗನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ಬಾವಿಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.