ದಾವಣಗೆರೆ: ರಿಷಬ್ ಶೆಟ್ಟಿ (Rishab Shetty) ಅಭಿನಯಿಸಿ ನಿರ್ದೇಶಿಸಿರುವ ಕಾಂತಾರ (Kantara) ಸಿನಿಮಾ ಇಡೀ ದೇಶದಲ್ಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಸಿನಿ ಪ್ರಿಯರನ್ನು ಆಕರ್ಷಿಸಿರುವ ಈ ಸಿನಿಮಾವನ್ನು ವೀಕ್ಷಿಸಲು ಪೊಲೀಸರು ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ.
ಹೌದು, ದಾವಣಗೆರೆಯ (Davangere) ಇಡೀ ಪೊಲೀಸ್ ಇಲಾಖೆ ಶುಕ್ರವಾರ ಸಂಜೆ ಕಾಂತಾರ ಸಿನಿಮಾವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ವಿಶೇಷ ಅಂದರೆ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ, ಎಸ್‍ಪಿ ಸಿಬಿ ರಿಷ್ಯಂತ್ ಕೂಡ ದಾವಣಗೆರೆ ನಗರದ ಗೀತಾಂಜಲಿ ಸಿನಿಮಾ ಮಂದಿರಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್‌ಗಳಿಬ್ಬರ ದುರ್ಮರಣ
ಕುತೂಹಲ ಹೆಚ್ಚಾಗಿ ಪೊಲೀಸರು ಕೂಡ ಕಾಂತಾರ ಚಿತ್ರವನ್ನು ವೀಕ್ಷಿಸಲು ನಿರ್ಧಾರ ಮಾಡಿ, ಶುಕ್ರವಾರ ಸಂಜೆ ಇಡೀ ಶೋ ಬುಕ್ ಮಾಡಿಕೊಂಡು ಕುಟುಂಬ ಸಮೇತ ಸಿನಿಮಾ ನೋಡಿದ್ದಾರೆ. ಸದಾ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿದ್ದ ದಾವಣಗೆರೆ ಪೊಲೀಸರು ಕೊಂಚ ಬಿಡುವು ಮಾಡಿಕೊಂಡು ತಮ್ಮ ಕುಟುಂಬಕ್ಕೂ ಸಮಯ ನೀಡಿ ಅವರೊಂದಿಗೆ ಚಿತ್ರ ನೋಡಿ ಮೈಂಡ್ ರಿಲೀಫ್ ಮಾಡಿಕೊಂಡಿದ್ದಾರೆ. ಇನ್ನು ಸಿನಿಮಾ ನೋಡಲು ಎಸ್‍ಪಿ, ಸಿಬಿ ರಿಷ್ಯಂತ್ ಹಾಗೂ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿಯವರಿಗೆ ಎಎಸ್‍ಪಿ, ಡಿವೈಎಸ್‍ಪಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಾಥ್ ನೀಡಿದರು. ಇದನ್ನೂ ಓದಿ: ಸೂರ್ಯಗ್ರಹಣ ಬರಿಗಣ್ಣಲ್ಲಿ ನೋಡಲೇಬೇಡಿ – ಗ್ರಹಣದ ಬಗ್ಗೆ ಮಾಹಿತಿ ನೀಡಿದ್ದಾರೆ ಭೌತಶಾಸ್ತ್ರಜ್ಞ ಎ.ಪಿ ಭಟ್