ಜಾಮೀನು ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು: ಸೋಮವಾರಕ್ಕೆ ವಿಚಾರಣೆ

Public TV
1 Min Read
Actor Darshan

ರೇಣುಕಾಸ್ವಾಮಿ (Renukaswamy) ಹತ್ಯೆಗೆ (Murder) ಸಂಬಂಧಿಸಿದಂತೆ ಕೊನೆಗೂ ದರ್ಶನ್ (Darshan) ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಬಂಧನವಾಗಿ 102 ದಿನಗಳು ಕಳೆದಿವೆ. ಚಾರ್ಜ್ ಶೀಟ್ ಸಲ್ಲಿಕೆಯಾಗಿ ಎರಡು ವಾರಗಳು ಆಗಿದ್ದರೂ, ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಇಂದು ಅರ್ಜಿ ಸಲ್ಲಿಕೆಯಾಗಿದೆ.

darshan renukaswamy pavithra gowda

ಸೆಷನ್ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ತುರ್ತು ವಿಚಾರಣೆಗಾಗಿ ಇಂದೇ ಮನವಿ ಮಾಡಿಕೊಳ್ಳಲಾಗಿತ್ತು. ದರ್ಶನ್ ಪರ ಸುನಿಲ್‍ ಕೋರ್ಟಿಗೆ ಹಾಜರಾಗಿದ್ದರು. ಎಸ್.ಪಿಪಿಗೆ ನೋಟಿಸ್ ಜಾರಿ ಮಾಡಿ ಇದೇ ಸೋಮವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಯಿತು.

ಈಗಾಗಲೇ ಪವಿತ್ರಾ ಗೌಡ ಕೂಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದು ಇನ್ನೂ ವಿಚಾರಣೆ ಆಗಬೇಕಿದೆ. ಈ ಬೆನ್ನಲ್ಲೇ ದರ್ಶನ್ ಕೂಡ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಅರ್ಜಿ ವಿಚಾರಣೆ ಇದೆ. ದರ್ಶನ್ ಫ್ಯಾನ್ಸ್ ಅಂತೂ ಜಾಮೀನು ಸಿಗಲೆಂದು ದೇವರಿಗೆ ಹರಕೆ ಕೂಡ ಹೊತ್ತಿದ್ದಾರೆ.

Share This Article