ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ (Darshan) ಹಾಗೂ ಪವಿತ್ರಾಗೌಡ (Pavithra Gowda) ಇಂದು (ಫೆ.25) ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಕೋರ್ಟ್ ನಲ್ಲಿ ದೂರ ದೂರ ನಿಂತಿದ್ದರು.
ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಕೋರ್ಟ್ ಕಲಾಪಕ್ಕೂ 10 ನಿಮಿಷ ಮೊದಲೇ ಕೋರ್ಟ್‌ನಲ್ಲಿ ಹಾಜರಾಗಿದ್ದರು. ದರ್ಶನ್ ಬರುವುದು ತಡವಾದ ಹಿನ್ನೆಲೆ 10 ನಿಮಿಷ ಕಲಾಪ ಮುಂದೂಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದರು. ದರ್ಶನ್ ಬರುತ್ತಿದ್ದಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು, ಎಲ್ಲರ ಹಾಜರಾತಿಯನ್ನ ಖಾತರಿಪಡಿಸಿಕೊಂಡ್ರು. ಪ್ರಕರಣದ ಆರೋಪಿಗಳಾದ ನಿಖಿಲ್ ಮತ್ತು ಕೇಶವಮೂರ್ತಿ ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಕೋರ್ಟ್‌ನಲ್ಲಿ ಹಾಜರಿದ್ದರು. ಇದನ್ನೂ ಓದಿ:
ಬೆನ್ನು ನೋವು ಶಮನವಾಗದ ಹಿನ್ನೆಲೆ ಕುಂಟುತ್ತಲೇ ಕೋರ್ಟ್ ಹಾಲ್‌ಗೆ ದರ್ಶನ್ ಬಂದಿದ್ದಾರೆ. ಈ ವೇಳೆ ಪವಿತ್ರಾಗೌಡ, ದರ್ಶನ್ ಕಡೆ ನೋಡಿದರೂ, ದರ್ಶನ್ ಅವರ ಕಡೆ ನೋಡಲೇ ಇಲ್ಲ. ಅಲ್ಲದೇ ಕೋರ್ಟ್‌ನಲ್ಲಿ ಬೇರೆ ಕಡೆ ಕುಳಿತುಕೊಂಡ್ರು. ಇತರ ಆರೋಪಿಗಳ ಜೊತೆ ಮಾತನಾಡಿದ ದರ್ಶನ್, ಪವಿತ್ರಾಗೌಡಳನ್ನ ಮಾತನಾಡಿಸಲೇ ಇಲ್ಲ. ಈ ಮೂಲಕ ಅಂತರವನ್ನು ಕಾಯ್ದುಕೊಳ್ಳುವ ಯತ್ನವನ್ನು ದರ್ಶನ್ ಮಾಡಿದ್ರು. ಕೋರ್ಟ್ ವಿಚಾರಣೆ ಮುಗಿದ ಬಳಿಕ ಪವಿತ್ರಾ ಹೋಗುವವರೆಗೂ ದರ್ಶನ್ ಕೋರ್ಟ್ ಹಾಲ್‌ನಲ್ಲಿಯೇ ಇದ್ದು, ಬಳಿಕ ಕೋರ್ಟ್ ಹಾಲ್‌ನಿಂದ ಹೋಗಿದ್ದಾರೆ. ಇನ್ನೂ ಪವಿತ್ರಾಗೌಡ ಅಳುತ್ತಾ ಕೋರ್ಟ್‌ನಿಂದ ಮನೆ ಕಡೆ ಹೊರಟಿದ್ದಾರೆ.
ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲ ಸುನೀಲ್, ಪೊಲೀಸರು ಪ್ರಕರಣದ ಇತರ ಆರೋಪಿಗಳನ್ನು ಮಾಫಿ ಸಾಕ್ಷಿಯಾಗುವಂತೆ, ಒತ್ತಡ ಬೆದರಿಕೆ ಹಾಕ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಪ್ರಮುಖವಾಗಿ ನಾಲ್ವರು ಆರೋಪಿಗಳನ್ನು ಮಾಫಿ ಸಾಕ್ಷಿಯಾಗುವಂತೆ ಬೆದರಿಕೆ ಹಾಕ್ತಿದ್ದಾರೆ. ಸಾಕಷ್ಟು ಸಾಕ್ಷಿಗಳಿದ್ದು, ಮಾಫಿ ಸಾಕ್ಷಿಯಾದ್ರೆ ಕೇಸ್‌ನಿಂದ ಖುಲಾಸೆ ಮಾಡಿಕೊಡೊದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಿದ್ರು. ಪ್ರತ್ಯೇಕ ಅರ್ಜಿ ಹಾಕಿದರೆ ವಾದಕ್ಕೆ ಅವಕಾಶ ಮಾಡಿಕೊಡೋದಾಗಿ ತಿಳಿಸಿ, ಮಾ.8ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು. ಇದನ್ನೂ ಓದಿ: ಪಂಜಾಬ್‌ನ ಆಪ್ ಸರ್ಕಾರದಿಂದ ಬುಲ್ಡೋಜರ್ ಅಸ್ತ್ರ – ಡ್ರಗ್ ಮಾಫಿಯಾ ಕಿಂಗ್‌ಗಳ ಮನೆ ನೆಲಸಮ