ಮಂಡ್ಯ: ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲೇ ಯಮಸ್ವರೂಪಿ ಟ್ಯಾಂಕರ್ ಒಂದು ಮಕ್ಕಳನ್ನು ಬಲಿಪಡೆಯಲು ಕಾಯುತ್ತಿದೆ. ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಸಂಭವವಿದ್ದು, ಆತಂಕದಲ್ಲಿರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರಲು ನಿರ್ಧರಿಸಿದ್ದಾರೆ.
Advertisement
ಜಿಲ್ಲೆಯ ಚೀರನಹಳ್ಳಿ ಗ್ರಾಮದ ಸರ್ಕಾರಿ ಪ್ರಥಾಮಿಕ ಶಾಲೆಯ ಆವರಣದಲ್ಲಿ ಸುಮಾರು 30 ವರ್ಷಗಳ ಹಳೆಯ ನೀರಿನ ಟ್ಯಾಂಕ್ ಇದ್ದು, ಈಗ ಆ ಟ್ಯಾಂಕ್ ಬಾಳಿಕೆ ಅವಧಿ ಮುಗಿದಿದೆ. ಯಾವಾಗ ಬೇಕಿದ್ದರು ಟ್ಯಾಂಕ್ ಕೆಳಗೆ ಬೀಳಬಹುದು. ಟ್ಯಾಂಕಿನ ಪಿಲ್ಲರ್ ಗಳು ಅಲುಗಾಡುತ್ತಿದ್ದು, ಸಿಮೆಂಟ್ ಪುಡಿ-ಪುಡಿಯಾಗಿ ಉದುರುತ್ತಿದೆ. ಶಾಲೆ ಆವರಣದಲ್ಲೇ ಟ್ಯಾಂಕರ್ ಇರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
Advertisement
ಟ್ಯಾಂಕ್ ಕೆಳಗೆ ಶಾಲಾ ಕೊಠಡಿಗಳು ಹಾಗೂ ಶೌಚಾಲಯವಿದೆ. ಮಕ್ಕಳು ಟ್ಯಾಂಕ್ ಕೆಳಗಿನಿಂದಲೇ ಶೌಚಾಲಯಕ್ಕೆ ಓಡಾಡಬೇಕು. ದಿನ ನಿತ್ಯ ಮಕ್ಕಳು ತಮ್ಮ ಆಟ ಪಾಠಗಳನ್ನು ಇದೇ ಟ್ಯಾಂಕ್ ಕೆಳಗೆ ನಿರ್ವಹಿಸಬೇಕಾಗಿದ್ದು, ಹೀಗಾಗಿ ಶಾಲೆಗೆ ಹೋಗಲು ಹೆದರಿಕೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
Advertisement
ಟ್ಯಾಂಕರ್ ಉರುಳಿ ದೊಡ್ಡ ಅನಾಹುತ ಸಂಭವಿಸುವ ಮೊದಲು ಜಿಲ್ಲಾಡಳಿತ ಎಚ್ಚೆತ್ತು ಸೂಕ್ತ ಕ್ರಮಗೊಳ್ಳಬೇಕಿದೆ.
Advertisement