ಅಮರಾವತಿ: ದಲಿತ ಯುವಕನ (Dalit Youth) ಮೇಲೆ ಆರು ಜನರ ಗ್ಯಾಂಗ್‌ವೊಂದು ಹಲ್ಲೆ ನಡೆಸಿದ್ದು, ನೀರು ಕೇಳಿದಾಗ ಮೂತ್ರ ವಿಸರ್ಜಿಸಿರುವ (Urinate) ಅಮಾನವೀಯ ಕೃತ್ಯ ಆಂಧ್ರಪ್ರದೇಶದ (Andhra Pradesh) ಎನ್‌ಟಿಆರ್ (NTR) ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಶ್ಯಾಮ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ದಲಿತ ಯುವಕನನ್ನು ಆರು ಮಂದಿ ಆರೋಪಿಗಳು ಸೇರಿಕೊಂಡು ಸತತ ನಾಲ್ಕು ಗಂಟೆಗಳ ಕಾಲ ಥಳಿಸಿದ್ದು, ನೀರು ಕೇಳಿದಾಗ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನ.19ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ – ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ ವೀಡಿಯೋ
Advertisement
Advertisement
ಘಟನೆ ಮುನ್ನೆಲೆಗೆ ಬಂದ ನಂತರ, ತೆಲುಗು ದೇಶಂ ಪಕ್ಷದ (TDP) ಪರಿಶಿಷ್ಟ ಜಾತಿ (SC) ಸೆಲ್ ಪ್ರತಿಭಟನೆಯನ್ನು ನಡೆಸಿದ್ದು, ರಸ್ತೆಗಳನ್ನು ನಿರ್ಬಂಧಿಸಿದೆ. ಟಿಡಿಪಿ ಎಸ್ಸಿ ಸೆಲ್ ಅಧ್ಯಕ್ಷ ಎಂಎಂಎಸ್ ರಾಜು ನೇತೃತ್ವದಲ್ಲಿ ಕಂಚಿಕಚೆರ್ಲಾ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರತಿಭಟನಾ ಧರಣಿ ನಡೆಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕು ಇರಿದು ಉಪನಿರ್ದೇಶಕಿಯ ಬರ್ಬರ ಹತ್ಯೆ
Advertisement
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂಎಂಎಸ್ ರಾಜು, ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಆಡಳಿತದಲ್ಲಿ ದಲಿತರ ಮೇಲಿನ ಹಲ್ಲೆಗಳು ಹೆಚ್ಚಿವೆ. ರಾಜ್ಯದಲ್ಲಿ ದಲಿತರ ಮೇಲೆ ಸಾಕಷ್ಟು ದಾಳಿಗಳು ನಡೆಯುತ್ತಿವೆ. ಶ್ಯಾಮ್ ಕುಮಾರ್ ಎಂಬ ಬಾಲಕನ ಮೇಲೆ ಆಡಳಿತ ನಡೆಸುವ ಮೂಲಕ ಹಲ್ಲೆ ಮಾಡಲಾಗಿದೆ ಎಂದು ಕಿಡಿಕಾರಿದರು. ಶ್ಯಾಮ್ ಅವರ ದವಡೆಗೆ ಆಪರೇಷನ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದು, ಅದಕ್ಕೆ ಮೂರು ದಿನ ಬೇಕು. ದಲಿತರ ಮೇಲಿನ ಹಲ್ಲೆಯನ್ನು ಖಂಡಿಸಿದ ಅವರು, ಈ ಘಟನೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ದೇಶದಲ್ಲಿ ಫಸ್ಟ್ – ಶಂಕಿತ ಉಗ್ರರ ಕಾಲಿಗೆ ಜಿಪಿಎಸ್ ಬಳೆ
Advertisement
ವಿಜಯವಾಡ ನಗರ ಪೊಲೀಸ್ ಕಮಿಷನರ್ ಕಂಠಿ ರಾಣಾ ಟಾಟಾ ಕೂಡ ಈ ಘಟನೆಯ ಬಗ್ಗೆ ಮಾತನಾಡಿ, ಕಂಚಿಕಚೆರ್ಲಾ ಗ್ರಾಮದ ನಿವಾಸಿ ಶ್ಯಾಮ್ ಕುಮಾರ್ ಎಂಬ ದಲಿತ ಯುವಕನ ಮೇಲೆ ಆತನ ಹಳೆಯ ಸ್ನೇಹಿತ ಹರೀಶ್ ರೆಡ್ಡಿ ಹಾಗೂ ಇತರ ಐವರು ಸೇರಿ ಹಲ್ಲೆ ನಡೆಸಿದ್ದಾರೆ. ಹರೀಶ್ ರೆಡ್ಡಿ ಅವರು ಶ್ಯಾಮ್ ಕುಮಾರ್ ಅವರನ್ನು ಶಿವಸಾಯಿ ಕ್ಷೇತ್ರ ಪ್ರದೇಶಕ್ಕೆ ಕರೆದು ಇತರ ಐವರ ಸಹಾಯದಿಂದ ಬಲವಂತವಾಗಿ ಕಾರಿಗೆ ತಳ್ಳಿ ಗುಂಟೂರಿಗೆ ಕರೆದೊಯ್ದರು. ಅಷ್ಟರಲ್ಲಿ ಕಾರಿನೊಳಗೆ ಕೆಟ್ಟದಾಗಿ ಹಲ್ಲೆ ಮಾಡಿದ್ದಾರೆ. ಆರೋಪಿಗಳನ್ನು ತ್ವರಿತ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಔಷಧಿ ಕಂಪನಿಯಲ್ಲಿ ಬೆಂಕಿ ಅವಘಡ – 8 ಮಂದಿ ಸಾವು