ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಯ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಬೆನ್ನಲ್ಲೇ ಇದೀಗ ಕೈ ನಾಯಕರಲ್ಲೀಗ ಸಿಎಂ ರೇಸ್ ಆರಂಭವಾಗಿದೆ. ಇನ್ನು ದಲಿತ ಸಿಎಂ ಮತ್ತೆ ಸದ್ದು ಮಾಡುತ್ತಿದ್ದು ಪ್ರಿಯಾಂಕ್ ಖರ್ಗೆಯವರನ್ನು ಸಿಎಂ ಮಾಡಬೇಕು ಅಂತಾ ಪೆÇೀಸ್ಟರ್ ವಾರ್ ಆರಂಭವಾಗಿದೆ.
ಹೌದು. ಚುನಾವಣೋತ್ತರ ಸಮೀಕ್ಷೆ (Exit Poll) ಗಳಲ್ಲಿ ಕಾಂಗ್ರೆಸ್‍ಗೆ ಬಹುಮತದ ಸುಳಿವು ಸಿಗುತ್ತಿದ್ದಂತೆ ಪಕ್ಷದಲ್ಲಿ ಆಂತರಿಕವಾಗಿ ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೊತೆಗೆ ಈಗ ಪರಮೇಶ್ವರ್ ಕೂಡ ಸಿಎಂ ಗಾದಿ ಮೇಲೆ ಟವೆಲ್ ಹಾಕಲು ನೋಡಿದ್ದಾರೆ. ಅತ್ತ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಆಗಬೇಕೆಂದು ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ.
Advertisement
Advertisement
ಕಾಂಗ್ರೆಸ್ (Congress) ನಾಯಕರು ಹಾಕಿರುವ ಪೋಸ್ಟ್ ನಲ್ಲಿ ಪ್ರಿಯಾಂಕ್ ಖರ್ಗೆ ಅವರು ಮುಂದಿನ ಸಿಎಂ. ಇದು ಅಪ್ಪನ ಕನಸಲ್ಲ, ಕೋಟ್ಯಂತರ ಕನ್ನಡಿಗರ ಕನಸು. ಪ್ರಿಯಾಂಕ್ ಖರ್ಗೆ ಅವರಿಗೆ ಅರ್ಹತೆ, ಸಾಮರ್ಥ್ಯ, ಯೋಗ್ಯತೆ, ಜ್ಞಾನ, ಬದ್ಧತೆ ಹಾಗೂ ಕನ್ನಡಿಗರ ಆಶೀರ್ವಾದವಿದೆ. ಹೀಗಾಗಿ ಮುಂದಿನ ಪ್ರಿಯಾಂಕ್ ಖರ್ಗೆ (Priyank Kharge) ಸಿಎಂ ಅಂತಾ ಕಲಬುರಗಿ ಕೈ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹಾಕಿದ್ದಾರೆ.
Advertisement
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ನಾನೇ ಸಿಎಂ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ.ಶಿವಕುಮಾರ್ (DK Shivakumar) ಈಗಾಗಲೇ ಸಿಎಂ ಕುರ್ಚಿಯ ಮೇಲೆ ಟವೆಲ್ ಹಾಕಿದ್ದಾರೆ. ಈ ಮಧ್ಯೆ ದಲಿತ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಎಕ್ಸಿಟ್ ಪೋಲ್ ನಂಬಿದ ಕಾಂಗ್ರೆಸ್‍ನಲ್ಲಿ ನಾನಾ ಲೆಕ್ಕಾಚಾರ- ಸಿಎಂ ಆಗುವ ಕನಸಲ್ಲಿ ಸಿದ್ದು, ಡಿಕೆ