ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಅಷ್ಠಮಿ ತಿಥಿ,
ಶುಕ್ರವಾರ, ಚಿತ್ತ ನಕ್ಷತ್ರ.
ಬೆಳಗ್ಗೆ 8:10 ನಂತರ ಸ್ವಾತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:54 ರಿಂದ 12:30
ಗುಳಿಕಕಾಲ: ಬೆಳಗ್ಗೆ 7:42 ರಿಂದ 9:18
ಯಮಗಂಡಕಾಲ: ಮಧ್ಯಾಹ್ನ 3:41 ರಿಂದ 5:17
Advertisement
ಮೇಷ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸ್ತ್ರೀಯರಿಂದ ನಿಂದನೆ-ಅಪವಾದ, ಗೌರವಕ್ಕೆ ಧಕ್ಕೆ, ಮಕ್ಕಳು ದಾರಿ ತಪ್ಪುವರು, ದುಶ್ಚಟಗಳು ಹೆಚ್ಚಾಗುವುದು.
Advertisement
ವೃಷಭ: ಸ್ಥಿರಾಸ್ತಿ ವಿಷಯಗಳಲ್ಲಿ ಮನಃಸ್ತಾಪ, ಮನಸ್ಸಿನಲ್ಲಿ ಆತಂಕ, ಸ್ತ್ರೀಯರೊಂದಿಗೆ ಮನಃಸ್ತಾಪ, ಶತ್ರುತ್ವ ಬೆಳೆಯುವುದು.
Advertisement
ಮಿಥುನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಗೆ ಮನಸ್ಸು, ಪ್ರಯಾಣದಲ್ಲಿ ಎಚ್ಚರಿಕೆ, ಪುಣ್ಯಕ್ಷೇತ್ರ ದರ್ಶನ.
Advertisement
ಕಟಕ: ಹಣಕಾಸು ಮೋಸ, ಸೈಟ್-ವಾಹನ ಖರೀದಿಯಲ್ಲಿ ತೊಂದರೆ, ಶತ್ರುಗಳೊಂದಿಗೆ ಕಿರಿಕಿರಿ, ಸಾಲಗಾರರೊಂದಿಗೆ ಜಗಳ, ಧಾರ್ಮಿಕ ಚಿಂತಕರನ್ನು ನಿಂದಿಸುವಿರಿ, ಅನಗತ್ಯ ವಾಗ್ವಾದ ಮಾಡುವಿರಿ.
ಸಿಂಹ: ಶೀತ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಪ್ರೇಮ ವಿಚಾರದಲ್ಲಿ ಚಿಂತೆ, ದಾಂಪತ್ಯದಲ್ಲಿ ಮನಃಸ್ತಾಪ, ಉದ್ಯೋಗ ಸ್ಥಳದಲ್ಲಿ ಅನುಮಾನ.
ಕನ್ಯಾ: ಆರ್ಥಿಕ ದುಃಸ್ಥಿತಿ, ಭವಿಷ್ಯದ ಬಗ್ಗೆ ಚಿಂತೆ, ನಿದ್ರಾಭಂಗ, ನಿದ್ರೆಯಲ್ಲಿ ಕೆಟ್ಟ ಕನಸು, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದ ಜೀವನ ಮಾಡುವಿರಿ.
ತುಲಾ: ಮಿತ್ರರೇ ಶತ್ರುವಾಗುವರು, ಅಹಂಭಾವದ ನಡವಳಿಕೆ, ಸ್ವಯಂಕೃತ್ಯಗಳಿಂದಲೇ ಗೌರವಕ್ಕೆ ಚ್ಯುತಿ, ಸ್ತ್ರೀಯರಿಂದ ಅದೃಷ್ಟ ಕೈ ತಪ್ಪುವುದು, ಮನಸ್ಸಿನಲ್ಲಿ ಸಂಕಟ.
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಹಣಕಾಸು ವಿಚಾರದಲ್ಲಿ ಅವಮಾನ, ಗೌರವಕ್ಕೆ ಚ್ಯುತಿ, ಕೆಟ್ಟ ಹವ್ಯಾಸಗಳು ಹೆಚ್ಚಾಗುವುದು, ಪ್ರೇಮ ವಿಚಾರದಲ್ಲಿ ಸಮಸ್ಯೆ, ಶತ್ರುಗಳು ಅಧಿಕವಾಗುವರು, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ.
ಧನಸ್ಸು: ಶತ್ರುಗಳ ಕಾಟ, ಮಾನಸಿಕ ವೇದನೆ, ಕುಲದೇವರ ನಿಂದನೆ ಮಾಡುವಿರಿ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ.
ಮಕರ: ಆತ್ಮೀಯರೊಂದಿಗೆ ಕಲಹ, ಆಕಸ್ಮಿಕ ದುರ್ಘಟನೆ, ಪಿತ್ರಾರ್ಜಿತ ಆಸ್ತಿ ತಗಾದೆ, ಆರ್ಥಿಕ ಸಮಸ್ಯೆ ಬಾಧಿಸುವುದು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ಅನ್ಯೋನ್ಯ ದಾಂಪತ್ಯದಲ್ಲಿ ಸಂಶಯ, ಕುಟುಂಬ ಗೌರವಕ್ಕೆ ಚ್ಯುತಿ, ಸ್ಥಿರಾಸ್ತಿ-ವಾಹನದಿಂದ ನಷ್ಟ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.
ಮೀನ: ಅನ್ಯರ ತಪ್ಪುಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಪೂಜೆ ಕಾರ್ಯಗಳಲ್ಲಿ ಅಸಮಾಧಾನ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ.