ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲಪಕ್ಷ, ಚತುರ್ಥಿ,
ಗುರುವಾರ, ಸ್ವಾತಿ ನಕ್ಷತ್ರ.
Advertisement
ರಾಹುಕಾಲ: ಮಧ್ಯಾಹ್ನ 1:50 ರಿಂದ 3:22
ಗುಳಿಕಕಾಲ: ಬೆಳಗ್ಗೆ 9:15 ರಿಂದ 10:47
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:43
Advertisement
ದಿನ ವಿಶೇಷ: ವರಸಿದ್ಧಿ ವಿನಾಯಕವ್ರತ
Advertisement
ಮೇಷ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಸ್ತ್ರೀಯರಿಂದ ಅವಮಾನ ನಿಂದನೆ, ಗೌರವಕ್ಕೆ ಚ್ಯುತಿ, ಮಕ್ಕಳು ದುಶ್ಚಟಕ್ಕೆ ದಾಸರಾಗುವರು.
Advertisement
ವೃಷಭ: ಸಹೋದರಿಯೊಂದಿಗೆ ಮನಃಸ್ತಾಪ, ಸ್ಥಿರಾಸ್ತಿ ನಷ್ಟದ ಭೀತಿ, ನೆರೆಹೊರೆಯವರೊಂದಿಗೆ ವೈಮನಸ್ಸು, ಶತ್ರುತ್ವ ವೃದ್ಧಿಸುವುದು.
ಮಿಥುನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಸಮಸ್ಯೆ, ಪ್ರಯಾಣದಲ್ಲಿ ಎಚ್ಚರಿಕೆ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.
ಕಟಕ: ಹಣಕಾಸು ಮೋಸ, ಸೈಟ್-ವಾಹನ ಖರೀದಿಯಲ್ಲಿ ಸಮಸ್ಯೆ, ಶತ್ರುಗಳು ನಿಂದನೆ ಮಾಡುವರು, ಧಾರ್ಮಿಕ ಚಿಂತಕರೊಂದಿಗೆ ವಾಗ್ವಾದ.
ಸಿಂಹ: ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ಬೇಸರ, ಪ್ರೇಮ ವಿಚಾರದಲ್ಲಿ ಚಿಂತೆ, ದಾಂಪತ್ಯದಲ್ಲಿ ಅನುಮಾನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಕನ್ಯಾ: ಆರ್ಥಿಕ ಸಂಕಷ್ಟ, ಭವಿಷ್ಯದ ಚಿಂತೆ, ಮಾನಸಿಕ ವ್ಯಥೆಯಿಂದ ನಿದ್ರಾಭಂಗ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸುಖಕರ ಜೀವನಕ್ಕೆ ಕಂಟಕ.
ತುಲಾ: ಮಿತ್ರರು ಶತ್ರುವಾಗಿ ಪರಿವರ್ತನೆಯಾಗುವರು, ಅಹಂಭಾವದ ನಡವಳಿಕೆಯಿಂದ ತೊಂದರೆ, ಗೌರವಕ್ಕೆ ಧಕ್ಕೆಯಾಗುವು ಸಾಧ್ಯತೆ, ಮಹಿಳಾ ಮಿತ್ರರಿಂದ ಅದೃಷ್ಟ ಕೈತಪ್ಪುವುದು, ಮನಸ್ಸಿನಲ್ಲಿ ಆತಂಕ-ಸಂಕಟ.
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಹಣಕಾಸು ವಿಚಾರದಲ್ಲಿ ತಗಾದೆ, ಗೌರವಕ್ಕೆ ಧಕ್ಕೆ ಸಾಧ್ಯತೆ, ದುಶ್ಚಟಗಳು ಹೆಚ್ಚಾಗುವುದು, ಪ್ರೇಮ ವಿಚಾರದಲ್ಲಿ ಸಮಸ್ಯೆ,
ಶತ್ರುಗಳು ಅಧಿಕ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ.
ಧನಸ್ಸು: ಶತ್ರುಗಳ ಕಾಟ, ಮಾನಸಿಕ ವೇದನೆ, ಕುಲದೇವರ ನಿಂದನೆ ಮಾಡುವಿರಿ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ.
ಮಕರ: ಆತ್ಮೀಯರೊಂದಿಗೆ ಕಲಹ, ಅನಿರೀಕ್ಷಿತ ದುರ್ಘಟನೆ, ಸ್ಥಿರಾಸ್ತಿ ತಗಾದೆ, ಕೋರ್ಟ್ ಕೇಸ್ ನಿಮಿತ್ತ ಅಲೆದಾಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ದಾಂಪತ್ಯದಲ್ಲಿ ಸಂಶಯ, ಕುಟುಂಬ ಗೌರವಕ್ಕೆ ಧಕ್ಕೆ, ಸ್ಥಿರಾಸ್ತಿ ವ್ಯವಹಾರದಲ್ಲಿ ನಷ್ಟ, ವಾಹನ ವಸ್ತ್ರಾಭರಣ ಕಳವು ಸಾಧ್ಯತೆ.
ಮೀನ: ಅನ್ಯರ ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಸಾಲಗಾರರಾಗುವ ಸಾಧ್ಯತೆ, ದೇವತಾ ಕಾರ್ಯಗಳಲ್ಲಿ ಅಸಮಾಧಾನ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv