ಮುಂಬೈ: ಭಾರತೀಯ ಸಿನಿ ಲೋಕದ ಬಹುನಿರೀಕ್ಷಿತ ದಬಾಂಗ್-3 ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಗೊಂಡ ಒಂದೇ ಗಂಟೆಯಲ್ಲಿ ಐದು ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ದಬಾಂಗ್ ನಲ್ಲಿ ಈ ಬಾರಿ ಚುಲ್‍ಬುಲ್ ಪಾಂಡೆ(ಸಲ್ಮಾನ್ ಖಾನ್)ಗೆ ಚಂದನವನದ ಹೆಬ್ಬುಲಿ ಕಿಚ್ಚ ಸುದೀಪ್ ಟಕ್ಕರ್ ನೀಡುತ್ತಿರುವ ಕಾರಣ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮೊದಲೆರಡು ಸಿನಿಮಾಗಳ ರೀತಿಯಲ್ಲಿ ಮೂರನೇ ಭಾಗವು ಸಹ 90ರ ದಶಕದ ಕಾಲಘಟ್ಟದಲ್ಲಿಯೇ ಮೂಡಿ ಬಂದಿದೆ. ಈ ಬಾರಿಯೂ ಚುಲ್‍ಬುಲ್ ಪಾಂಡೆಯ ಪತ್ನಿ ರಜ್ಜು ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ ಮಿಂಚಿದ್ದಾರೆ. ದಬಾಂಗ್ ಮತ್ತು ದಬಾಂಗ್-2ರಲ್ಲಿ ಸಲ್ಮಾನ್ ಖಾನ್ ನಟನೆ ಮತ್ತು ಹೊಸ ಶೈಲಿಯ ಡ್ಯಾನ್ಸ್ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ವಿಲನ್ ಪಾತ್ರಧಾರಿಗಳು ದಬಾಂಗ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಮೂರನೇ ಭಾಗದಲ್ಲಿ ಚಂದನವನದ ಹೆಬ್ಬುಲಿ ಸಿಖಂದರ್ ಭಾರಧ್ವಜ ಪಾತ್ರದಲ್ಲಿ ಘರ್ಜನೆ ಆರಂಭಿಸಿದೆ.
ಪತ್ನಿ ರಜ್ಜು ಪ್ರೇಮಪಾಶದಲ್ಲಿರುವ ಚುಲ್‍ಬುಲ್ ಪಾಂಡೆಗೆ ಸಾಯಿಯ ಮೋಡಿಗೆ ಸಿಲುಕುತ್ತಾರಾ? ಸಾಯಿಗಾಗಿಯೇ ಚಲುಬುಲ್ ಪಾಂಡೆ ಮತ್ತು ಸಿಖಂದರ್ ನಡುವೆ ದ್ವೇಷಕ್ಕೆ ಕಾರಣವಾಗುತ್ತಾ ಎಂಬುದು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಅರ್ಬಾಜ್ ಖಾನ್, ನಿಖಿಲ್ ದ್ವಿವೇದಿ ನಿರ್ಮಾಣ ಮತ್ತು ಪ್ರಭುದೇವ ದಬಂಗ್ ಸಿನಿಮಾ ಮೂಡಿ ಬಂದಿದೆ. ಇದೇ ಡಿಸೆಂಬರ್ 20ರಂದು ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.
ದಬಾಂಗ್ ಸಿನಿಮಾದ ಸುದೀಪ್ ಅವರ ಫಸ್ಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಸಲ್ಮಾನ್ ಖಾನ್, ವೈರಿ ಎಷ್ಟು ಬಲಿಷ್ಠನಾಗಿರುತ್ತಾನೊ ಆತನೊಂದಿಗೆ ಹೋರಾಡಲು ಅಷ್ಟೇ ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದರು. ಸಲ್ಮಾನ್ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಕಿಚ್ಚ, ಹೋರಾಡುವ ಮಾತೇ ಬರುವುದಿಲ್ಲ ಸರ್. ಏಕೆಂದರೆ ವಿಲನ್‍ಗೆ ಹೀರೋ ಮೇಲೆ ಪ್ರೀತಿ ಆಗುತ್ತದೆ. ನಿಮ್ಮ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ತಂದಿದೆ. ನಿಮ್ಮ ಜೊತೆ ಹಂಚಿಕೊಂಡ ಎಲ್ಲ ಕ್ಷಣಗಳು ಅಮೂಲ್ಯವಾದುದ್ದು” ಎಂದು ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದರು.
#Dabangg3 kannada trailer
????????????????
https://t.co/bOfl2lPYi5
— Kichcha Sudeepa (@KicchaSudeep) October 23, 2019
Here comes CHULBUL PANDEY wth his swag,,,once again.
Presenting the Trailer of #Dabangg3…
Him bhi Swag se Swagath karenge…. ????
Cheerssss ????????????????https://t.co/IPur0ixry6
— Kichcha Sudeepa (@KicchaSudeep) October 23, 2019