D51: ಧನುಷ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್

Public TV
1 Min Read
rashmika mandanna

‘ಕಿರಿಕ್ ಪಾರ್ಟಿ’ ಬ್ಯೂಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಇದೀಗ ಮತ್ತೊಂದು ಬಂಪರ್ ಚಾನ್ಸ್ ಪಡೆದುಕೊಂಡಿದ್ದಾರೆ. ಸೂಪರ್ ಹೀರೋ ಧನುಷ್ ನಟನೆಯ (Dhanush) 51ನೇ ಸಿನಿಮಾಗೆ ನಾಯಕಿಯಾಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

rashmika mandanna 1 3

ಸೌತ್- ಹಾಲಿವುಡ್ ರಂಗದಲ್ಲಿ ಮಿಂಚ್ತಿರೋ ಧನುಷ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಸೆಲೆಕ್ಟ್ ಆಗಿದ್ದಾರೆ. ಈ ಬಗ್ಗೆ ಸ್ವತಃ ನಟಿಯೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಖುಷಿ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮದುವೆಗೆ ಸಜ್ಜಾದ್ರಾ ತೆಲುಗು ಹೀರೋ- ಅಪ್‌ಡೇಟ್ ಹಂಚಿಕೊಂಡ ವಿಶ್ವಕ್ ಸೇನ್

rashmika mandanna 1 4

‘ಲವ್ ಸ್ಟೋರಿʼ (Love Story)  ಚಿತ್ರ ಖ್ಯಾತಿಯ ನಿರ್ದೇಶಕ ಶೇಖರ್ ಕಮ್ಮುಲ ಈ ಚಿತ್ರಕ್ಕೆ ಡೈರೆಕ್ಷನ್ ಮಾಡ್ತಿದ್ದಾರೆ. ವಿಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಸಿನಿಮಾದಲ್ಲಿ ಲಿಡ್ಡಿಂಗ್ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡ್ರೆ, ಮತ್ತೋರ್ವ ನಾಯಕಿಯಾಗಿ ‘ಬೊಟ್ಟ ಬೊಮ್ಮ’ ನಟಿ ಅನಿಕಾ(Anika) ಎನ್ನಲಾಗ್ತಿದೆ. ಒಟ್ನಲ್ಲಿ ಒಂದೊಳ್ಳೆ ಪ್ರೇಮ ಕಥೆ ಜೊತೆ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನ ಈ ಚಿತ್ರದಲ್ಲಿ ನಿರೀಕ್ಷೇ ಮಾಡಬಹುದಾಗಿದೆ. ಮತ್ತೊಂದು ವಿಶೇಷ ಅಂದರೆ ಧನುಷ್‌ಗೆ ಇದು ತೆಲುಗಿನ ಮೊದಲ ಸಿನಿಮಾ ಆಗಿದೆ.

ಪುಷ್ಪ 2, ಅನಿಮಲ್ (Animal) ಸಿನಿಮಾದ ನಂತರ ಟೈಗರ್ ಶ್ರಾಫ್ ಜೊತೆಗಿನ ಪ್ರಾಜೆಕ್ಟ್, ವಿಕ್ರಮ್- ವಿಜಯ್ ಸೇತುಪತಿ ಜೊತೆ ಹೊಸ ಸಿನಿಮಾ, ಇದೀಗ ಧನುಷ್ ಜೊತೆಗಿನ ಚಿತ್ರ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಖಾತೆಯಲ್ಲಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article