ಬೆಂಗಳೂರು: ದೆಹಲಿಗೆ ಹೋಗೋದು ರಾಜಕಾರಣ. ಹೈಕಮಾಂಡ್ ನಾಯಕರೊಬ್ಬರು ಕರೆದಿದ್ದಾರೆ ಎಂದು ದೆಹಲಿ ಭೇಟಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪ್ರತಿಕ್ರಿಯೆ ನೀಡಿದರು.
ಬಜೆಟ್ ಮೀಟಿಂಗ್ ಇದ್ದರೂ ದೆಹಲಿಗೆ ಪ್ರಯಾಣ ಮಾಡುತ್ತಿರುವ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ನಮ್ಮ ವಾಟರ್ ರಿಸೋರ್ಸ್ ಬಗ್ಗೆ ಸಿಎಂ ಬಳಿ ಮಾತನಾಡಿದ್ದೇನೆ. ನಮ್ಮ ಅಧಿಕಾರಿಗಳಿಗೆ ಎಲ್ಲ ಹೇಳಿದ್ದೇನೆ. ನಾಳೆ ಕೇಂದ್ರ ಸಚಿವರು, ಲೀಗಲ್ ಟೀಂ ಅನ್ನು ಭೇಟಿ ಮಾಡ್ತೀನಿ ಎಂದು ತಿಳಿಸಿದರು. ಇದನ್ನೂ ಓದಿ: ಸಂಗಮ ಕೆಳಭಾಗದಲ್ಲಿ ಮೇಕೆದಾಟು ಡ್ಯಾಂಗೆ ಸ್ಥಳ ನಿಗದಿ – ಕೇಂದ್ರಕ್ಕೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ
ಕಾಂಗ್ರೆಸ್ ಹೈಕಮಾಂಡ್ ಭೇಟಿ ಬಗ್ಗೆ ಮಾತನಾಡಿ, ನನ್ನನ್ನು ಯಾರು ಕರೆದಿದ್ದಾರೋ ಅವರನ್ನ ಭೇಟಿಯಾಗುತ್ತೇನೆ. ಅವೆಲ್ಲವನ್ನೂ ಈಗ ಹೇಳೋಕೆ ಆಗಲ್ಲ. ನಾನು ಡಿಸಿಎಂ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷನಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್ 10 ಕ್ಕೆ 6 ವರ್ಷ ಆಗುತ್ತೆ. ನಮ್ಮ ಹೈಕಮಾಂಡ್ ನಾಯಕರ ಭೇಟಿಯಾಗಬೇಕಲ್ವ ಎಂದರು.
ನಾಳೆ ಬಜೆಟ್ ಪೂರ್ವಭಾವಿ ಮೀಟಿಂಗ್ ಇದ್ದರೂ ದೆಹಲಿಗೆ ತೆರಳುತ್ತಿರುವ ಕುರಿತು ಪ್ರತಿಕ್ರಿಯಿಸಿ, ಸಿಎಂ ಅನುಮತಿ ಪಡೆದು ಹೋಗುತ್ತಿದ್ದೇನೆ. ಅವರೇ ಜಲಸಂಪನ್ಮೂಲ ಇಲಾಖೆ ಅಧ್ಯಕ್ಷರಿದ್ದಾರೆ. ಅವರಿಗೆಲ್ಲವೂ ಗೊತ್ತಿದೆ. ನಿನ್ನೆ ಅವರೇ ಮೇಕೆದಾಟು ಬಗ್ಗೆ ಮಾತನಾಡಿದ್ರಲ್ವ? ನನಗೆ ಮೇಕೆದಾಟು ಆಗದಿರುವುದರ ಬಗ್ಗೆ ದುಃಖ ಇದೆ. ಇಲಾಖೆಯಲ್ಲಿ 59 ಸಾವಿರ ಕೇಸ್ ಇದೆ. ಅದೆಲ್ಲವನ್ನ ಸರಿ ಮಾಡುತ್ತಿದ್ದೇವೆ ಎಂದರು. ಜಲಸಂಪನ್ಮೂಲ ಖಾತೆಗೆ ಯಾರಾದ್ರೂ ಕಣ್ಣಾಕಿದ್ರೆ ಎಂಬ ಪ್ರಶ್ನೆಗೆ, ಹಾಕಿದ್ರೆ ಹಾಕಲಿ ಬಿಡಿ ಎಂದು ಸನ್ನೆ ಮಾಡಿದರು. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣಪತ್ರ – ಹೊಸ ನಿಯಮಕ್ಕೆ ಆಶೋಕ್ ಆಕ್ರೋಶ

