ನವದೆಹಲಿ: ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಆಡಳಿತದ ಆರಂಭದಲ್ಲಿ ನೈತಿಕ ಪೊಲೀಸ್‌ಗಿರಿಗೆ ಬೆಂಬಲಿಸಿದರು. ಕಾನೂನು ವ್ಯವಸ್ಥೆಯನ್ನು ಸಡಿಲ ಬಿಟ್ಟರು. ಇದರಿಂದಲೇ ರಾಜ್ಯದಲ್ಲಿ ಕೋಮುಗಲಭೆಗಳು ಹೆಚ್ಚಾಗುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ಬಗ್ಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಕಾನೂನುಸುವ್ಯವಸ್ಥೆಯನ್ನು ಆರಂಭದಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ಅದನ್ನು ಸಡಿಲ ಬಿಟ್ಟರು, ಅದರಿಂದ ಈ ಸಮಸ್ಯೆಯಾಗಿದೆ. ವ್ಯಾಪರಾದಲ್ಲೂ ಧರ್ಮ ಸೇರಿಸಲಾಯಿತು. ಇದರಿಂದ ಸಾಮರಸ್ಯಕ್ಕೆ ದೊಡ್ಡ ಪೆಟ್ಟು ಬಿದ್ದು, ವ್ಯವಸ್ಥೆ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಲ್ಲರ ಗಮನ ಸೆಳೆದ ಗುಹೆಗಳ ಮಾದರಿ ಅಂಗನವಾಡಿ ವಿನ್ಯಾಸ
Advertisement
Advertisement
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗುಪ್ತಚರ ಇಲಾಖೆ ವಿಫಲವಾಗಿದ್ದು, ಇಡೀ ಸರ್ಕಾರ ವಿಫಲವಾಗಿದೆ. ಕೊಲೆಯಾದ ಬಳಿಕ ಕುಟುಂಬಸ್ಥರಿಗೆ ಹೋಗಿ ದುಡ್ಡು ಕೊಟ್ಟು ಬಂದ್ರೆ ಅವರಿಗೆ ನ್ಯಾಯ ಸಿಕ್ಕಂತಲ್ಲ. ಕೊಲೆಗಳು ಕೊನೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂದಿದ್ದಾರೆ.
Advertisement
ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಭದ್ರತೆ ನೀಡಲು ಸಾಧ್ಯವಿಲ್ಲ ಎಂದ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದರೇ ಕಲ್ಲು ಒಡೆಸುತ್ತಿದ್ದಾರ? ಸಂಸದರು ಮಾತನಾಡುವ ಮಾತಾ ಇದು. ತೇಜಸ್ವಿ ವಿದ್ಯಾವಂತ, ಬುದ್ಧಿವಂತ ಅನ್ಕೊಂಡಿದ್ದೆ. ಆದರೆ ಅವರಿಗೆ ವಿದ್ಯೆನೂ ಇಲ್ಲ, ಬುದ್ಧಿನೂ ಇಲ್ಲ. ತೇಜಸ್ವಿ ಸೂರ್ಯ ಅವರ ಮಾತನ್ನು ಜನರೇ ಮೆಚ್ಚಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.
Advertisement
ಬಿಜೆಪಿ ತನ್ನ ವೈಫಲ್ಯಗಳನ್ನು ಕಾಂಗ್ರೆಸ್ ಮೇಲೆ ಹಾಕುತ್ತಿದೆ. ಕಾಂಗ್ರೆಸ್ ಮೇಲೆ ಯಾಕೆ ಆರೋಪ ಮಾಡ್ತೀರಿ? ಜನರು ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ದಿಟ್ಟ ಕ್ರಮ ತೆಗೆದುಕೊಳ್ಳಿ, ಎಲ್ಲರ ಜೀವವೂ ಒಂದೇ, ದ್ವೇಷಕ್ಕೆ ಇತಿಶ್ರೀ ಹಾಡಬೇಕು ಎಂದು ಮನವಿ ಮಾಡಿದ್ದಾರೆ.
ಸತ್ತವರೆಲ್ಲರೂ ಅಮಾಯಕರು, ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಜಾತಿ ಧರ್ಮದ ಮೇಲೆ ರಾಜಕಾರಣ ಮಾಡಬಾರದು. ಇದು ಸಾಮರಸ್ಯಕ್ಕೆ ಧಕ್ಕೆ ಬರಲಿದೆ. ಸರ್ಕಾರದ ಕೆಲವರು ರಾಜಕೀಯ, ಧರ್ಮದ ಬಣ್ಣದ ಹೇಳಿಕೆ ಕೊಡಲು ಪ್ರಯತ್ನಿಸುತ್ತಿದ್ದಾರೆ. ಘಟನೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು. ತಪ್ಪಿತಸ್ಥರು ಯಾರೇ ಆಗಿದ್ದರು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿ ಕೊಡುತ್ತದೆ: ತೇಜಸ್ವಿ ಸೂರ್ಯ
ರಾಜ್ಯದಲ್ಲಿ ಯೋಗಿ ಮಾದರಿ ಜಾರಿ ಮಾಡುವ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ಮಾದರಿ ಇಡೀ ದೇಶಕ್ಕೆ ನಂಬರ್ ಒನ್ ಆಗಿತ್ತು. ಯೋಗಿ ಮಾದರಿ ಏನು ಅಂತಾ ಗೊತ್ತಿಲ್ಲ. ದೇಶದಲ್ಲಿ ಕಾನೂನು ಸಂವಿಧಾನ ಇದೆ. ಅದರ ಅಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕು. ಎಸ್‍ಡಿಪಿಐ ಬ್ಯಾನ್ ಮಾಡುವ ಬಗ್ಗೆ ಎಲ್ಲೆಲ್ಲಿ ಪತ್ರ ಬರಿಬೇಕು, ಅಲ್ಲಿಗೆ ನಮ್ಮ ಅವಧಿಯಲ್ಲಿ ಪತ್ರ ಬರೆದಿದೆ. ಹಾಲಿ ಸರ್ಕಾರ ಎಸ್‍ಡಿಪಿಐ ಯಾಕೆ ಬ್ಯಾನ್ ಮಾಡ್ತಿಲ್ಲ ಸರ್ಕಾರ ಕೇಳಿ ಎಂದು ಪ್ರಶ್ನಿಸಿದ್ದಾರೆ.