ಸೈರಸ್‌ ಮಿಸ್ತ್ರಿ ಸಾವು ಪ್ರಕರಣ – ಅಪಘಾತಕ್ಕೀಡಾದ ಕಾರು ಪರಿಶೀಲಿಸಲು ಹಾಂಗ್‌ ಕಾಂಗ್‌ನಿಂದ ಬಂದ ಮರ್ಸಿಡಿಸ್ ತಜ್ಞರು

Public TV
1 Min Read
Mercedes

ಮುಂಬೈ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (Cyrus Mistry) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದ ಕಾರನ್ನು ತನಿಖೆ ಮತ್ತು ಪರಿಶೀಲನೆ ನಡೆಸಲು ಹಾಂಗ್ ಕಾಂಗ್‌ನ (Hong Kong) ಮರ್ಸಿಡಿಸ್ ತಜ್ಞರ (Mercedes experts) ತಂಡ ಮುಂಬೈಗೆ (Mumbai) ಭೇಟಿ ನೀಡಿದೆ.

Cyrus Mistry

ಮಂಗಳವಾರ ಥಾಣೆಯಲ್ಲಿರುವ ಮರ್ಸಿಡಿಸ್ ಶೋ ರೂಂಗೆ ಭೇಟಿ ನೀಡಿರುವ ತಂಡ ಪರಿಶೀಲನೆ ನಡೆಸಲಿದೆ. ನಂತರ ತಂಡವು ಮರ್ಸಿಡಿಸ್ ಬೆಂಜ್ ಕಂಪನಿಗೆ ವರದಿಯನ್ನು ಸಲ್ಲಿಸಲಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

Cyrus Mistry Car Accident

ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಮಿಸ್ತ್ರಿ ಸೆಪ್ಟೆಂಬರ್ 4 ರಂದು ಮುಂಬೈ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು. ಪಾಲ್ಘರ್ ಪೊಲೀಸರ ಪ್ರಕಾರ, ಮಿಸ್ತ್ರಿ ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ನಾಲ್ಕು ಜನರಿದ್ದರು. ಮಿಸ್ತ್ರಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕಾರು ತಯಾರಕ ಕಂಪನಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅಪಘಾತದ ಸಂದರ್ಭದಲ್ಲಿ ಕಾರಿನ ಏರ್‌ ಬ್ಯಾಗ್‌ಗಳು ಏಕೆ ತೆರೆದಿಲ್ಲ? ವಾಹನದಲ್ಲಿ ಏನಾದರೂ ಯಾಂತ್ರಿಕ ದೋಷವಿದೆಯೇ? ಕಾರು ಟೈರ್‌ ಒತ್ತಡ ಏನು ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಕಂಪನಿ ಉತ್ತರಗಳನ್ನು ನೀಡಿದ್ದು, ಪೊಲೀಸರ ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಸೈರಸ್ ಮಿಸ್ತ್ರಿ ಕಾರು ಅಪಘಾತಕ್ಕೂ 5 ಸೆಕೆಂಡ್ ಮುನ್ನ ಬ್ರೇಕ್ ಹಾಕಲಾಗಿದೆ: ಮರ್ಸಿಡಿಸ್ ಕಂಪನಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *